ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತನುಶ್ರೀ


 

ತನುಶ್ರೀ


ಎಸ್. ಎನ್. ತನುಶ್ರೀ ಸೃಜನಶೀಲ ಉದ್ಯಮಿಯಾಗಿ ಗಮನ ಸೆಳೆಯುತ್ತಾರೆ.


ಆಗಸ್ಟ್ 10, ತನುಶ್ರೀ ಅವರ ಹುಟ್ಟುಹಬ್ಬ.  ಅವರು ಹುಟ್ಟಿದ್ದು ಮೈಸೂರಲ್ಲಿ.  ಮುಂದೆ ಓದಿ ಬೆಳೆದದ್ದು ದಾವಣಗೆರೆಯಲ್ಲಿ.  ಇಂಜಿನಿಯರಿಂಗ್ ಪದವಿ ಪಡೆದ ತನುಶ್ರೀ ಹಲವು ವರ್ಷ ಪ್ರಸಿದ್ಧ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ತಂತ್ರಜ್ಞರಾಗಿ ಸೇವೆ ಸಲ್ಲಿಸಿದರು.


ಸದಾ ಸೃಜನಶೀಲ ಹವ್ಯಾಸಗಳತ್ತ ಮನವುಳ್ಳ ತನುಶ್ರೀ ಕೆಲವು ವರ್ಷ ಕರಕುಶಲ ಆಭರಣಗಳ ತಯಾರಿಕೆಯ 'ಭವ್ಯಮ್ ಕ್ರಿಯೇಷನ್ಸ್' ಎಂಬ ಸ್ವಯಂ ಉದ್ಯೋಗ ಕೈಗೊಂಡರು. ಮುಂದೆ ಭಾರತೀಯ ಆಟಿಕೆಗಳ ಚಿಂತನೆಗಳತ್ತ ದೃಷ್ಟಿಹಾಯಿಸಿದ ಅವರು RolltheDice ಎಂಬ ಸಂಸ್ಥೆಯನ್ನು ಕುಟುಂಬದೊಂದಿಗೆ ಮೈಸೂರಿನಿಂದ ನಡೆಸುತ್ತಿದ್ದಾರೆ.


ಈ ಸಂಸ್ಥೆಯ ಉತ್ಪನ್ನಗಳನ್ನು ನೋಡಿದರೆ ಮನ ಅರಳುತ್ತದೆ.   5 ಮನೆ ಚೌಕಾಬಾರಾ, 7 ಮನೆ ಚೌಕಾಬಾರಾ, ಲುಡೋ ಆಟ, ಪಗಡೆ, ಚೌಸರ್, ಅಳಿಗುಳಿ ಮನೆ, ಆಡು ಹುಲಿ, ನವಕಂಕರಿ, ಶೋಲೊ ಗುಟ್ಟಿ, ತಾಬ್ಲಾ ಮುಂತಾದ ಆಟಗಳಿಗೆ ಅನುವಾಗುವ ಮನಮೋಹಕ ವರ್ಣಗಳಲ್ಲಿನ ಆಟದ ಹಾಸುಗಳು ಮತ್ತು  ಸುಂದರ ಅಗತ್ಯ ಸಲಕರಣೆಗಳ ಆಕರ್ಷಕ ಡಬ್ಬಿಗಳು ಇವರ ಸಂಸ್ಥೆಯ ಉತ್ಪನ್ನಗಳಲ್ಲಿವೆ.   ಇದಲ್ಲದೆ ದೇವತಾ ವಾಹನಗಳು, ರಾಮಾಯಣ, ದಶಾವತಾರ ಚಿತ್ರಗಳು ಮುಂತಾದವುಗಳನ್ನೊಳಗೊಂಡ ಪಜಲ್ ಉಳ್ಳ ಚಿತ್ರಜೋಡಣಾ ಸೆಟ್ಗಳು ಕೂಡಾ ಈ ಸಂಸ್ಥೆಯ ಜನಪ್ರಿಯ ಉತ್ಪನ್ನಗಳಲ್ಲಿ ಸೇರಿವೆ.


ತನುಶ್ರೀ ಈ ಆಟಗಳ ಅನುಭವಕ್ಕಾಗಿಯೇ ಮೈಸೂರಿನಲ್ಲಿ ಒಂದು  experience center ಮೂಡಿಸಿದ್ದಾರೆ.  ಅಲ್ಲಿ ಬಂದು ಈ ಆಟಗಳ ಬಗ್ಗೆ ತಿಳಿದುಕೊಂಡು ಕಲಿಯುವ ಅವಕಾಶವನ್ನೂ ಕಲ್ಪಿಸಿದ್ದಾರೆ.


ತನುಶ್ರೀ ಅವರಿಗೆ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಹೀಗೆ ಪ್ರತಿಯೊಂದರಲ್ಲೂ ಅಪಾರ ಆಸಕ್ತಿ.


ಆತ್ಮೀಯರಾದ ತನುಶ್ರೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು


Happy birthday Tanushri SN 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ