ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲತಾ ಗುತ್ತಿ


 ಲತಾ ಗುತ್ತಿ


ಡಾ. ಲತಾ ಗುತ್ತಿ ಅವರು ನಮ್ಮ ಕನ್ನಡ ನಾಡಿನ ಪ್ರಸಿದ್ಧ ಬರಹಗಾರ್ತಿ. 

ಮೂಲತಃ ಬೆಳಗಾವಿಯವರಾದ ಲತಾ 1953ರ ಆಗಸ್ಟ್ 12ರಂದು ಜನಿಸಿದರು. ತಂದೆ ನಾಗನಗೌಡ. ತಾಯಿ ಶಾಂತಾದೇವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿರುವ ಲತಾ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿಯನ್ನೂ  ಪಡೆದಿದ್ದಾರೆ.  ಇವರ 'ಪ್ರವಾಸ ಸಾಹಿತ್ಯ ವಿಶ್ವ ಸಂಸ್ಕೃತಿಗಳು' (2006) ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಗೌರವ ಸಂದಿದೆ.  ಸೌದಿ ಅರೇಬಿಯಾ, ಲಂಡನ್, ಪ್ರಾನ್ಸ್, ಇಟಲಿ, ಬೆಲ್ಜಿಯಂ, ಹಾಲೆಂಡ್ ಮುಂತಾದ ಅನೇಕ ದೇಶಗಳಲ್ಲಿ ಪ್ರವಾಸ ಮಾಡಿರುವ ಇವರು ಒಟ್ಟು  15  ವರ್ಷಗಳಷ್ಟು  ಕಾಲ ವಿದೇಶಗಳಲ್ಲಿ ನೆಲೆಸಿದ್ದವರು. ಪ್ರಸಕ್ತದಲ್ಲಿ ಇವರು ಬೆಂಗಳೂರಿನ ನಿವಾಸಿಯಾಗಿದ್ದಾರೆ.

ಬಹುಮುಖಿ ಬರಹಗಾರರಾದ ಲತಾ ಗುತ್ತಿ ಅವರು ವಿಶೇಷವಾಗಿ ಪ್ರವಾಸ ಕಥನ, ಕಾದಂಬರಿ, ಕಥೆ ಹಾಗೂ ಕವಿತೆಗಳಿಗೆ ಪ್ರಸಿದ್ಧರು. ಯುರೋನಾಡಿನಲ್ಲಿ , ನಾ ಕಂಡಂತೆ ಅರೇಬಿಯಾ, ಅಂಡಮಾನಿನ ಎಳೆಯನು ಹಿಡಿದು, ಚಿರಾಪುಂಜಿಯವರೆಗೆ, ರಷ್ಯಾ ಎಂದರೆ ರಷ್ಯಾ ಮುಂತಾದವು ಇವರ ಪ್ರವಾಸ ಕಥನಗಳಲ್ಲಿ ಸೇರಿವೆ.  ಹೆಜ್ಜೆ , ಕರಿನೀರು, ಚದುರಂಗ ಇವರ ಕಾದಂಬರಿಗಳಲ್ಲಿ ಸೇರಿವೆ. 'ಕಡಲಾಚೆಯ ಕಥೆಗಳು’ ಇವರ ಕಥಾಸಂಕಲನ.  ಸಮಕಾಲೀನ ಬಂಗಾಲಿ ಕವಿಯತ್ರಿಯರ ಕವಿತೆಗಳ ಅನುವಾದ ’ಕವಿತೆ ಉದಯಿಸಿದಾಗ’. ವರ್ತಮಾನ,  ಗಾಂಜಾಡಾಲಿ, ಬೆಳ್ಳಿ ಹೂವು, ಸೂಜಿಗಲ್ಲು, ಇರುವಿಕೆ, ಆಕಾಶ ಗೀತೆಗಳು, ಭೂಮಿ ಬಾನಿನ ನಡುವೆ ಸಮಗ್ರ ಕಾವ್ಯ, ಕಿಚ್ಚು ಹಾಯುವ ಕಾಲ, ಸಿರಿ ಮುಂತಾದವು ಇವರ ಕಾವ್ಯ ಸಂಕಲನಗಳಲ್ಲಿ ಸೇರಿವೆ. 
 
ಲತಾ ಗುತ್ತಿ  ಅವರಿಗೆ ಎರಡು ಬಾರಿ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಹಲವು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು,  ಮಾತ್ರೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಸರ್ವಭಾಷಾ ಕಾವ್ಯ ಸಮ್ಮೇಳನದಲ್ಲಿ ಭಾಗವಹಿಕೆ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಆತ್ಮೀಯರಾದ ಡಾ. ಲತಾ ಗುತ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ. 

Happy birthday Dr. Lata Gutti 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ