ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೈಜಯಂತಿಮಾಲಾ


 ವೈಜಯಂತಿಮಾಲಾ 


ಚಲನಚಿತ್ರ ಮತ್ತು ಭರತನಾಟ್ಯ ಕಲಾವಿದೆಯಾಗಿ ಪ್ರಖ್ಯಾತರಾಗಿರುವ ವೈಜಯಂತಿಮಾಲಾ ದಕ್ಷಿಣ ಭಾರತದಿಂದ ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದ ಕಲಾವಿದೆಯರಲ್ಲಿ ಪ್ರಥಮಸಾಲಿನವರು.   

ವೈಜಯಂತಿಮಾಲಾ 1936ರ ಆಗಸ್ಟ್ 13ರಂದು ಜನಿಸಿದರು. ವೈಜಯಂತಿಮಾಲಾ 1936ರ ಆಗಸ್ಟ್ 13ರಂದು ಜನಿಸಿದರು. ಈಕೆ ಜನಿಸಿದ್ದು ಚೆನ್ನೈನಲ್ಲಿ.  ತಂದೆ ಮಂಡ್ಯಂ ಧಾಟಿ ರಾಮನ್ ಮತ್ತು ವಸುಂಧರ ದೇವಿ.  ಅಜ್ಜಿ ಯದುಗಿರಿ ದೇವಿ.  ಇವು ಅವರ ಹಿರಿಯರ ಕರ್ನಾಟಕದ ನೆಲೆಯನ್ನು ಗುರುತಿಸುವುದು ಎಂದರೆ ತಪ್ಪಾಗುವುದಿಲ್ಲ.  ಆದರೆ ಅವರು ಬೆಳೆದದ್ದು ತಮಿಳುನಾಡಿನಲ್ಲಿ.  ತಾಯಿ ಅಂದಿನ ಕಾಲದ ಪ್ರಖ್ಯಾತ ಸಿನಿಮಾ ತಾರೆ ಆಗಿದ್ದರು.

ವೈಜಯಂತಿಮಾಲಾ 1949ರ ವರ್ಷದಲ್ಲಿ ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ‘ವಾಳ್ಗೈ’ ಎಂಬ ತಮಿಳು ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವೈಜಯಂತಿಮಾಲಾ ಮುಂದೆ ತಮಿಳು ಮತ್ತು ಹಿಂದೀ ಭಾಷೆಗಳೆರಡರಲ್ಲೂ ಪ್ರಖ್ಯಾತಿ ಪಡೆದ ತಾರೆಯೆನಿಸಿದರು.  

ವೈಜಯಂತಿಮಾಲಾ ಬಹಾರ್, ನಾಗಿನ್, ದೇವದಾಸ್, ಕಟ್ಪುತ್ಲಿ, ಸಾಧನಾ, ನಯಾ ದೌರ್, ಮಧುಮತಿ,  ಗಂಗಾ ಜಮುನಾ, ಸಂಗಮ್,  ಲೀಡರ್, ಪೆಹ್ಲಿ ಜಲಕ್, ಆಮ್ರಪಾಲಿ, ಜ್ಯೂಯೆಲ್ ಥೀಫ್, ಸಂಘರ್ಷ್  ಹೀಗೆ ಹಲವಾರು ಚಿತ್ರಗಳಲ್ಲಿ ದಿಲೀಪ್ ಕುಮಾರ್, ರಾಜ್ ಕಫೂರ್, ದೇವಾನಂದ್, ಕಿಶೋರ್ ಕುಮಾರ್  ಮುಂತಾದ ಪ್ರಸಿದ್ಧರೊಂದಿಗೆ ನಟಿಸಿ ಪ್ರಸಿದ್ಧಿ ಪಡೆದರು.  ತಮ್ಮ ಸೌಂಧರ್ಯ, ನೃತ್ಯ ಮತ್ತು ಅಭಿನಯಗಳಿಂದ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ವೈಜಯಂತಿಮಾಲಾ ಅವರ ಹೆಸರು ಅಂದಿನ ಈ ಮಹಾನ್ ನಟರುಗಳ ಹೆಸರುಗಳ ಜೊತೆಯಲ್ಲಿ ನಿರಂತರವಾಗಿ ಸುದ್ದಿಯಲ್ಲಿತ್ತು.   ಮುಂದೆ ಅವರು ಚಮನ್ ಲಾಲ್ ಬಾಲಿ ಅವರನ್ನು ವರಿಸಿದರು.  

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದ ವೈಜಯಂತಿಮಾಲಾ,  ಜಿ. ಡಿ. ವೆಂಕಟರಾಂ ಎಂಬುವರು ನಿರ್ಮಿಸಿದ್ದ ಆಶಾ ನಿರಾಶಾ ಎಂಬ ಕನ್ನಡ ಚಿತ್ರದಲ್ಲೂ ನಟಿಸಿದ್ದರಂತೆ.   ಆದರೆ ಆ ಚಿತ್ರ ತೆರೆಕಾಣಲಿಲ್ಲ.  

ವಿವಾಹದ ನಂತರದಲ್ಲಿ ಇನ್ನೂ ಪ್ರಸಿದ್ಧಿಯಲ್ಲಿರುವಾಗಲೇ ಚಿತ್ರರಂಗವನ್ನು ತ್ಯಜಿಸಿದ ವೈಜಯಂತಿಮಾಲಾ ಬಾಲಿ, ಮುಂದೆ ತಮ್ಮ ಹೆಚ್ಚಿನ ಸಮಯವನ್ನು ಭರತನಾಟ್ಯ ಕಲೆಗೆ ಮೀಸಲಿಟ್ಟರು.  ತಮ್ಮ ನೃತ್ಯ ಪ್ರದರ್ಶನ ಮತ್ತು ನೃತ್ಯ ಸಂಯೋಜನೆಗಳಿಂದ ಅವರು ವಿಶ್ವದಾದ್ಯಂತ ಜನರನ್ನು ನೃತ್ಯಕಲೆಯತ್ತ ಆಕರ್ಷಿಸಿದ್ದಾರೆ.    ಗೋಲ್ಫ್ ಆಟದಲ್ಲಿ ಸಹಾ ಅವರು ಪರಿಣಿತರು.  ರಾಜಕೀಯದಾಟದಲ್ಲಿ ಸಹಾ ಇವರು ಕಾಂಗ್ರೆಸ್ ಮತ್ತು ಭಾಜಪ  ಪಕ್ಷಗಳ ಮೂಲಕ ಅನೇಕ ಬಾರಿ ಲೋಕಸಭೆ ಇಲ್ಲವೇ ರಾಜ್ಯಸಭೆಗಳ ಸದಸ್ಯತ್ವ ನಿರ್ವಹಿಸಿದ್ದಾರೆ.  

ನಾಟ್ಯಕಲೆಯಲ್ಲಿನ ಮಹತ್ಸಾಧನೆಗಾಗಿ ವೈಜಯಂತಿಮಾಲಾ ಅವರು  ಸಂಗೀತ ನಾಟಕ ಅಕಾಡೆಮಿಯ ಗೌರವವನ್ನು ಪಡೆದಿದ್ದಾರೆ. ಸಂಗಮ್, ದೇವದಾಸ್, ಸಾಧನಾ, ಮಧುಮತಿ, ಗಂಗಾ ಜಮುನಾ,  ಸಂಘರ್ಷ್ ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಫಿಲಂಫೇರ್, ಬಿ.ಎಫ್.ಜೆ.ಎ ಮುಂತಾದ  ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ, ಕಲೈಮಾಮಣಿ  ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

On the birthday of great actress and dancer Vyjayanthimala

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ