ವೆಂಕಟರಮಣನೆ ಬಾರೋ
ವೆಂಕಟರಮಣನೆ ಬಾರೋ
ಶೇಷಾಚಲವಾಸನೆ ಬಾರೋ
ಪಂಕಜನಾಭ ಪರಮ ಪವಿತ್ರ
ಶಂಕರ ಮಿತ್ರನೇ ಬಾರೋ
ಮುದ್ದು ಮುಖದ ಮಗುವೆ
ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ ||೧||
ಮಂದರ ಗಿರಿಯನೆತ್ತಿದ
ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ ||೨||
ಕಾಮನಯ್ಯ ಕರುಣಾಳು
ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ ||೩||
ಸಾಹಿತ್ಯ: ಪುರಂದರದಾಸರು
ಕಾಮೆಂಟ್ಗಳು