ಬರಹ
ಬರಹ
ಕೈಬರಹ ದಿನವನ್ನು ಜನವರಿ 23 ರಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯದ ಘೋಷಣೆಗೆ ಸಹಿ ಹಾಕಿದ ಮೊದಲ ವ್ಯಕ್ತಿ ಜಾನ್ ಹ್ಯಾನ್ಕಾಕ್ ಅವರ ಜನ್ಮದಿನದ ಗೌರವಾರ್ಥ ಈ ಕೈಬರಹದ ದಿನ ಆಚರಿಸುತ್ತಾರಂತೆ.
ಮುಂಚೆ ಎಲ್ಲರೂ ಬರೀತಿದ್ರು. ಈಗ ಡಿಜಿಟಲ್ ಉಪಕರಣಗಳು ಬಂದು, "ನನಗೂ ಬರೆಯಕ್ಕೆ ಬರತ್ತೆ ಅಂತ ಬರೆದು, ಅದನ್ನು ಫೋಟೋ ತೆಗೆದು, ಇಲ್ಲಿ ಪೋಸ್ಟ್ ಮಾಡೋ ಅಷ್ಟು ದೈನ್ಯಕ್ಕೆ ನಮ್ಮ ಬದುಕಿಳಿದಿದೆ!"
ನಾನಂತೂ ಆಗಾಗ ಬರೀತೀನಿ. ನಾ ಕೆಲಸ ಮಾಡೋಕೆ ಸಾಧ್ಯ ಆಗೋದು, ಸ್ಪಷ್ಟವಾಗಿ ಯೋಚಿಸೋಕೆ ಸಾಧ್ಯ ಆಗೋದು, ನನ್ನ ತಲೆಯಲ್ಲಿರೋದನ್ನು ಪೇಪರ್ ಮೇಲೆ ಬರೆದಾಗಲೇ. ಮೊಬೈಲ್ ಮತ್ತು ಕಂಪ್ಯೂಟರ್ ನನಗೆ ಈ ನಿಟ್ಟಿನಲ್ಲಿ ಸಹಾಯ ಮಾಡದು. ಅದ್ರೂ ನನಗೋಸ್ಕರ ಗೀಚಿಕೊಳ್ಳೋಕೂ, ಲವ್ ಲೆಟರ್ ಬರೆಯೋಕೂ ವೆತ್ಯಾಸ ಇದೆ ಅಲ್ವಾ 😊
ಬರೆಹ ಅಂದೊಡನೆ ನನಗೆ ತುಂಬಾ ಇಷ್ಟ ಆಗೋದು ಡಿವಿಜಿ ಅವರ ಈ ಕಗ್ಗ. ವಿಧಿ ನಮ್ಮ ಬದುಕಿಗೆ ಏನು ಬರೆದಿದೆಯೊ ಅದನ್ನು ಬರೆದಾಗಿದೆ. ಅದನ್ನು ಜೋಯಿಸರ ಬಳಿ ಹೋಗಿ ತಿದ್ದಿಸಿಕೊಂಡು ಬರಲಾಗುವುದಿಲ್ಲ ಎಂಬುದನ್ನ ನಾವು ಅರ್ಥೈಸಿಕೊಳ್ಳಬೇಕು.
ಅಂದ್ರೆ, ವಿಧಿ ಬರೆದದ್ದಕ್ಕೆ ನಾ ಏನೂ ಮಾಡಕ್ಕಾಗಲ್ಲ
ಎಂಬ ಅಸಹಾಯಕತೆಯಲ್ಲಿರಬೇಕು ಎಂಬ ಎಂಬರ್ಥ ಇಲ್ಲಿಲ್ಲ. ಯಾವ ದಶೆಯೂ ಬಂದು ನಮ್ಮ ಕಾಪಾಡೋಲ್ಲ. ಏನಾಗುತ್ತೊ ಸಹನೆಯಿಂದ ನೋಡಿ, ಆಯಾ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯೊನ್ಮುಖನಾಗು ಎಂಬ ಅರ್ಥ ನನಗಿಲ್ಲಿ ಕಾಣಬರುತ್ತೆ. ಗ್ರಹಗಳ ದಶೆ ಸರಿಯಿಲ್ಲ ಅಂತ ಜೋಯಿಸರ ಹತ್ರ ದಕ್ಷಿಣೆ ಕೊಟ್ಟು ದಶೆ ಬದಲಾಗುತ್ತೆ ಎಂಬ ವ್ಯರ್ಥ ಮೌಢ್ಯ ಬೇಡ ಎಂದು ಇದನ್ನು ಅರ್ಥೈಸಬಹುದೇನೊ! ಹಾಗೆಂದ ಮಾತ್ರಕ್ಕೆ ಜ್ಯೋತಿಷ ಬಲ್ಲವರು ಬೇಸರಿಸಬೇಕಿಲ್ಲ!
ಪ್ರಾಜ್ಞ ಜೋಯಿಸರು ಕೂಡ ಹೀಗೆ ಪರಿಸ್ಥಿತಿ ಬರಬಹುದು, ಹೀಗೆ ಪರಿಸ್ಥಿತಿ ಆದಾಗ, ಹಾಗೆ ಮಾಡು ಎಂಬ ಪ್ರಾಜ್ಞ ಮತ್ತು ಯುಕ್ತ ಮಾತು ಹೇಳುವ ಸಾಧ್ಯತೆ ಇಲ್ಲದಿಲ್ಲ. ಆದರೆ, ದುಡ್ಡು ಖರ್ಚು ಮಾಡಿ ಶಾಂತಿ ಮಾಡು, ದಶೆ ಬದಲಾಗುತ್ತೆ ಎಂಬ ಸಣ್ಣತನಗಳಿಂದ ಹಿಂಸಿಸಲು ಕಾದಿರುವ ರಕ್ಕಸರಿಂದ ದೂರ ಇರೋದು ಉತ್ತಮ.
ನಮ್ಮ ಬದುಕಿನ ಬರಹ ನಾವೇ ಮಾಡ್ಕೋಬೇಕು ಅಲ್ವಾ! ದಿನಾ ಒಂದಷ್ಟು ಬರೆಯೋಣ. 😊
ಕಾಮೆಂಟ್‌ಗಳು