ಕಮಲೇ ಕಮಲಾಲಯೇ
ಕಮಲೇ ಕಮಲಾಲಯೇ|
ಕಮಲ ಭವಾದಿ ಸುರ ವಂದಿತ ಪದೇ||
ತ್ರಿಗುಣಾಭಿಮಾನಿಯೆ ಅಗಣಿತ ಗುಣ ಶ್ರೇಣಿಯೇ
ಖಗವಾಹನನ ರಾಣಿಯೇ |
ಹಗಲು ಇರುಳು ಹರಿಪದಯುಗ ತೋರಿಸೆ ||೧||
ಲಿಂಗ ಶರೀರವ ಭಂಗವ ಗೈಯಲು
ನಿನ್ನಂಗದಲ್ಲಿನಾ ಬೆವರಿನ |
ಸಂಗವಾಗಲು ಭವಭಂಗ ಹಿಂಗುವುದು ||೨||
ಧಾಮತ್ರಯ ರೂಪಿಣಿ ಕಮಲ ಭವಾಂತ ಕಾರಿಣಿ
ವಿಮಲ ಪದುಮ ಸರೋವಾಸಿನಿ |
ಸ್ವಾಮಿತೀರ್ಥದಿ ನಿಂತ ಶ್ರೀ ವೆಂಕಟೇಶನ ರಾಣಿ ||೩||
ಸಾಹಿತ್ಯ: ಬೇಲೂರು ವೆಂಕಟದಾಸರು
ಕಾಮೆಂಟ್‌ಗಳು