ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಸವಿ


 ಎಂ. ಕೆ. ವಾಸವಿ 


ಎಂ. ಕೆ. ವಾಸವಿ ಅವರು ಸಂಗೀತ ಮತ್ತು ನೃತ್ಯ ಕಲಾವಿದೆ ಹಾಗೂ ಕಲಾಗುರು. 

ಆಗಸ್ಟ್ 15, ವಾಸವಿ ಅವರ ಜನ್ಮದಿನ. ಇವರು ಹುಟ್ಟಿದ ಊರು ಮೈಸೂರು. ಸಂಗೀತ ಇವರ ಕುಟುಂಬಕ್ಕೆ ಇವರ ಮುತ್ತಾತನವರ ಕಾಲದಿಂದ ಬಂದ ಕಲೆ.  ಇವರ ತಾತ ಕೃಷ್ಣಪ್ಪ ನವರು ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದರು.  ತಂದೆ ಮೃದಂಗ ಮತ್ತು ಘಟo ವಾದಕರಾದ ಕರ್ನಾಟಕ ಕಲಾಶ್ರೀ ಎಂ .ಎ. ಕೃಷ್ಣಮೂರ್ತಿ ಅವರು. ತಾಯಿ ಜಯಲಕ್ಷ್ಮಿ ವೀಣಾ ಪಟು.

ವಾಸವಿ ಅವರು ಮೃದಂಗ,  ಘಟಂ ಮತ್ತು
ತಬಲ ವಾದನವನ್ನು ಚಿಕ್ಕ ವಯಸ್ಸಿನಿಂದಲೇ ತಂದೆಯವರಿಂದ  ಕಲಿತರು. ಮುಂದೆ ಕಥಕ್ ಅಂಡ್ ಕೊರಿಯೋಗ್ರಫಿ ವಿಷಯದಲ್ಲಿ ಪದವಿ ಪಡೆದು ಸಂಗೀತ ಮತ್ತು ನೃತ್ಯ ಶಿಕ್ಚಕಿಯಾಗಿದ್ದಾರೆ.

ವಾಸವಿ ಅವರು ಆಲ್ ಇಂಡಿಯಾ ರೇಡಿಯೋ,  ಚಂದನ ವಾಹಿನಿ ಮತ್ತು ಇತರ ಟಿವಿ ವಾಹಿನಿಗಳು ಹಾಗೂ ಭಾರತ ಮತ್ತು ವಿದೇಶಗಳ  ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಕಲಾವಿದೆ ವಾಸವಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ. 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ