ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಕ್ಷತಾ ರಾಜ್ ಪೆರ್ಲ


 ಅಕ್ಷತಾ ರಾಜ್ ಪೆರ್ಲ


ಅಕ್ಷತಾ ರಾಜ್ ಪೆರ್ಲ ಅವರು ಕನ್ನಡ, ತುಳು, ಹವ್ಯಕ ಭಾಷೆಯ ಲೇಖಕಿಯಾಗಿ ಹೆಸರಾಗಿದ್ದಾರೆ.

ಆಗಸ್ಟ್ 17 ಅಕ್ಷತಾ ಅವರ ಜನ್ಮದಿನ. ಮೂಡಬಿದ್ರಿಯ ಮೂಲದವರಾದ ಇವರು ಪ್ರಸ್ತುತ ಪೆರ್ಲದಲ್ಲಿ ನೆಲೆಸಿದ್ದಾರೆ.

ಅಕ್ಷತಾ ಅವರು ಮಂಗಳೂರು ಆಕಾಶವಾಣಿಯಲ್ಲಿ ಹಂಗಾಮಿ ನಿರೂಪಕರು. ತುಳು, ಕನ್ನಡ ಹಾಗೂ ಹವ್ಯಕ ಭಾಷೆಗಳಲ್ಲಿ ಇವರ ಕಾದಂಬರಿ, ನಾಟಕ, ಪ್ರಬಂಧ, ಕವನ, ಕಥೆಗಳು ಪ್ರಕಟಗೊಂಡಿವೆ.ಇವರ ತುಳು ಕೃತಿಗಳಲ್ಲಿ ಬೊಳ್ಳಿ'(ಕಾದಂಬರಿ), 'ಬೇಲಿ – ಸಾಪೊದ ಕಣ್ಣ್’, ‘ಗಿಡ್ಡಿ’, ‘ಮಂದಾರ ಮಲಕ’ (ನಾಟಕಗಳು) ಸೇರಿವೆ.

ಅಕ್ಷತಾ ಅವರ ಕನ್ನಡ ಕೃತಿಗಳಲ್ಲಿ ‘ಸಂಚಿಯೊಳಗಿನ ಸಂಜೆಗಳು’ (ಕವನ ಸಂಕಲನ), 'ಕಂದೀಲು’ (ಕಥಾಸಂಕಲನ), ‘ಅವಲಕ್ಕಿ ಪವಲಕ್ಕಿ’ (ಪ್ರಬಂಧ ಸಂಕಲನ), 'ನೆಲ ಉರುಳು’, ‘ಪರಿಧಿಯಾಚೆ’, 'ಅಸಂಗತ'  - 'ರಾಜೀ' ಮತ್ತು 'ಪ್ರಭಾಸ' (ನಾಟಕಗಳು) ಸೇರಿವೆ.

ಅಕ್ಷತಾ ಅವರಿಗೆ ಹವ್ಯಕ ಕತೆಗಳಿಗಾಗಿ ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯದಲ್ಲಿನ ಕೊಡುಗೆಗಳಿಗಾಗಿ ಕರ್ನಾಟಕ ಲೇಖಕಿಯರ ಸಂಘದ ದತ್ತಿನಿಧಿ ಪುರಸ್ಕಾರ  ಮತ್ತು ಕರಾವಳಿ ವಾಚಕಿಯರ ಲೇಖಕಿಯರ ಸಂಘದ ದತ್ತಿನಿಧಿ ಪುರಸ್ಕಾರ, ತುಳು ಸಾಹಿತ್ಯಕ್ಕಾಗಿ ಪೂವರಿ ತುಳು ಸಾಹಿತ್ಯ ಪ್ರಶಸ್ತಿ, ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪುರಸ್ಕಾರ, ಸತತ ಮೂರು ಬಾರಿ ಕುಡ್ಲ ತುಳುಕೂಟ ಆಯೋಜನೆಯ ಶ್ರೀಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಪ್ರಶಸ್ತಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಾಟಕ ವಿಭಾಗ ಪುರಸ್ಕಾರಗಳು ಸೇರಿದಂತೆ ಅನೇಕ ಗೌರವಗಳು ಸಂದಿವೆ. ಇವರ ಕತೆಗಳು ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಭಾಷೆಗಳಿಗೆ ಅನುವಾದವಾಗಿವೆ.  ಅಕ್ಷತಾ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿ, ಮೈಸೂರು ದಸರಾ ಕವಿಗೋಷ್ಠಿ, ಜಿಲ್ಲಾ ಅಬ್ಬಕ್ಕ ಉತ್ಸವ, ಮೈಸೂರು ಸಾಹಿತ್ಯ ಉತ್ಸವ  ಸೇರಿದಂತೆ ಅನೇಕ ವೇದಿಕೆಗಳಲ್ಲಿ ಕವಿಯಾಗಿ ಭಾಗವಹಿಸಿದ್ದಾರೆ.

ಪ್ರತಿಭಾನ್ವಿತ ಸಾಧಕಿ ಅಕ್ಷತಾ ರಾಜ್ ಪೆರ್ಲ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Akshatha Raj Perla 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ