ಶುಕ್ರವಾರ, ಸೆಪ್ಟೆಂಬರ್ 6, 2013

ಚಂದ್ರಮುಖಿ ಪ್ರಾಣಸಖಿ

ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೆ
ಮಾನವ ಕೋಟಿಯ ಸಲಹುವ ಶಕ್ತಿ
ಯಾವುದು ನೀ ಹೇಳೆ
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೆ

ಮನೆಯನು ಮಡದಿಯು ಬೆಳಗುವಳು
ಮಾರ್ಗವ ತೋರುವಳು
ಮನೆಯನು ಮಡದಿಯು ಬೆಳಗುವಳು
ಮಾರ್ಗವ ತೋರುವಳು
ಮನುಜನ ಬಾಳಿನ
ಕಷ್ಟದೆ ಸುಖದೆ
ಜೊತೆಯಲೆ ನಡೆಯುವಳು
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೆ

ಮಾತೆಯು ಮಗುವ ನವ ಮಾಸಗಳು
ಮುದದಲಿ ಧರಿಸುವಳು
ಮಾತೆಯು ಮಗುವ ನವ ಮಾಸಗಳು
ಮುದದಲಿ ಧರಿಸುವಳು
ಕರುಳಿನ ಕುಡಿಗೆ
ಅಮೃತ ನೀಡಿ
ಮಮತೆಯ ಸಾರುವಳು
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೆ

ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೆ
ಮಾನವ ಕೋಟಿಯ ಸಲಹುವ ಶಕ್ತಿ
ಮಹಿಳೆಯು ತಾ ತಿಳಿಯೆ
ಎಂದಿಗೂ
ಮಹಿಳೆಯು ತಾ ತಿಳಿಯೆ
ನಿಜದಲಿ
ಮಹಿಳೆಯು ತಾ ತಿಳಿಯೆ

ಚಿತ್ರ: ನಾಂದಿ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್. ಜಾನಕಿ ಮತ್ತು ಬೆಂಗಳೂರು ಲತಾ
Tag: Chandramukhi praanasakhi 

ಕಾಮೆಂಟ್‌ಗಳಿಲ್ಲ: