ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಣ್ಣಾ ನಿನ್ನ ಸೋದರಿಯನ್ನ,

ಅಣ್ಣಾ ನಿನ್ನ ಸೋದರಿಯನ್ನ,
ಮರೆಯದಿರೂ ಎಂದೆಂದೂ
ಓ ಅಣ್ಣಾ...

ಒಂದೇ ಬಳ್ಳಿಯ ಹೂಗಳು ನಾವು
ಪ್ರೀತಿಯೇ ನಮಗಾಧಾರ
ಒಂದೇ ರಾಗ, ಹರಿಸಿರಿ ಈಗ,
ಪಾವನ ಗಂಗಾಧಾರ

ಸಿರಿತನ ಮಾಯೆ, ಬಡತನ ಛಾಯೆ
ಶಾಶ್ವತ ಒಂದೇ ಪ್ರೀತಿ
ಸೋದರ ಪಾಶ, ಅಳಿಯದ ಆಶ
ತಂಗಿಯ ಬಾಳಿನ ಜ್ಯೋತಿ

ತೌರನು ತೊರೆದು ನಡೆದರು ದೂರ
ಬಾರದು ಪ್ರೀತಿಗೆ ಲೋಪ
ತಂಗಿಯ ನೆನೆದು ಉರಿಸುತಿರಣ್ಣ
ನೆನಪಿನ ನಂದಾದೀಪ

ಸಂಗೀತ: ಸತ್ಯಂ
ಸಾಹಿತ್ಯ: ಗೀತಪ್ರಿಯ
ಗಾಯನ: ಎಸ್. ಜಾನಕಿ
Tag: Anna ninna sodari enna






ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ