ಶನಿವಾರ, ಸೆಪ್ಟೆಂಬರ್ 7, 2013

ಕೈ ತುತ್ತು ಕೊಟ್ಟೋಳೆ

ಈ ತಾಯಿಯ ಹಾರ್ಟು ಆ ಮೌಂಟ್ ಎವರೆಸ್ಟು
ಆ ಶಿಖರದ ವೆಯ್ಟು ಆಹಾ  ತಿಳಿದವರೆಷ್ಟು

ಕೈ ತುತ್ತು ಕೊಟ್ಟೋಳೆ ಐ ಲವ್ಯೂ ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ಯಾವತ್ತೂ ಕಾಯೋಳೆ, ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ,
ಮದರ್ ಇಂಡಿಯಾ
ತಾಯಿಗೆ ಮಿಗಿಲಾದ ಗಾಡ್ ಇಲ್ಲ 
ಅಂತ ನಂಬಿರೋ ಸನ್ ಇಂಡಿಯಾ
ಬಾಯಿಗೆ ತುತ್ತಿಟ್ಟ ಮಮ್ಮೀಗೆ 
ಪ್ರಾಣ ನೀಡುವೆ ನೀ ಕಂಡೆಯಾ
ಕೈ ತುತ್ತು ಕೊಟ್ಟೋಳೆ ಐ ಲವ್ಯೂ ಮೈ ಮದರ್ ಇಂಡಿಯಾ
ಮದರ್ ಇಂಡಿಯಾ

ಫುಡ್ ಇಲ್ದೆ ಕ್ಲಾತ್ ಇಲ್ದೆ ನಿಂತಿದ್ದೆ 
ನಾನು ಫುಟ್ಪಾತ್ನಲ್ಲೊಂದು ದಿನ
ಕಣ್ಣಿದ್ದೂ ನೋಡದೆ ಹೋದರು 
ಫುಡ್ಡು ಕ್ಲಾತ್ ಇದ್ದ ಎಷ್ಟೋ ಜನ
ಮುಚ್ಚಿದ್ದ ಕಣ್ಣಿನ ಮೇಲಿದ್ದ 
ನೋವ ಮುಟ್ಟಿತ್ತು ಒಂದು ಕೈ
ಅತ್ತಿದ್ದ ಕೆನ್ನೆಗೆ ಮೆತ್ತಿದ್ದ 
ಬಿಸಿ ಕಂಬಿನಿ ಒರೆಸಿದ ಕೈ
ಕೊಡುಗೈ ದೇವರನ್ನು ನಾ ಕಾಣೆ,
ಕಾಣೆ,
ನನಗೆ ನೀನೇ ದೈವವೇ
ನಿನ್ನಾsಣೆ
ಕೈ ತುತ್ತು ಕೊಟ್ಟೋಳೆ ಐ ಲವ್ಯೂ ಮೈ ಮದರ್ ಇಂಡಿಯಾ
ಮದರ್ ಇಂಡಿಯಾ

ಬೆಡ್ಡಿಲ್ದೆ ಬ್ಲಡ್ ಇಲ್ದೆ ಮಲಗಿದ್ದೆ,
ನಾನು ಸರ್ಕಾರಿ ಆಸ್ಪತ್ರೇಲಿ
ನಮ್ಮಮ್ಮ ಅಲ್ಲಿಗೆ ಬರದಿದ್ದರೆ,
ನನ್ನ ಡೆಡ್  ಬಾಡಿ ಷೋಕೇಸಲ್ಲಿ
ಬಂದಳೋ ನಮ್ಮಮ್ಮ ಬಂದಳೋ,
ಎಲ್ಲಾ ದೇವರ ನಡುಗಿಸಲು
ಪ್ರೀತಿಯ ಔಷಧ ಬಾಡಿಗೆ
ಕೊಟ್ಟು ಮಗನನ್ನು ಬದುಕಿಸಲು
ಅಮ್ಮಾ ಎಂಬ ಮಾತಲೀ 
ಇದೆಯೋ ಮೆಡಿಸನ್
ಮಗನೇ ಎಂದ ಕೂಡಲೇ 
ಲೈಫೋ ಮೈಸನ್
ಕೈ ತುತ್ತು ಕೊಟ್ಟೋಳೆ ಐ ಲವ್ಯೂ ಮೈ ಮದರ್ ಇಂಡಿಯಾ
ಮದರ್ ಇಂಡಿಯಾ

ಹ್ಯಾಂಡ್ ಕೆಸರಾದರೆ ತಾನೇನೇ,
ನಮ್ಮ ಮೌತ್ ಮೊಸರಾಗುವುದು,
ವರ್ಕೇ, ವರ್ಶಿಪ್ಪು ಎಂದರೆ, 
ಸುತ್ತೋ ಗ್ಲೋಬಲ್ಲಿ ಹೆಸರುಳಿಯೋದು.
ದೇವರು ಕೊಟ್ಟಿದ್ದು ಹಂಚೋಕೆ
ಕೂಡಿ ಇಟ್ಟರೆ ತಪ್ಪು ಮಗಾ,
ಬಡವರ ಸೇವೇಯೇ ಪೂಜೆಯು,
ಎಂದ ಮಮ್ಮಿಗೆ ಜೈಜೈ ಈಗ
ನಾನೇ ಕರುವು ಆದರೆ ಅವಳೇ ಹಸುವು,
ಅಂಬಾ ಎಂದ ಕೂಡಲೇ, ಇರದೋ ಹಸಿವು
ಕೈ ತುತ್ತು ಕೊಟ್ಟೋಳೆ ಐ ಲವ್ಯೂ ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ಯಾವತ್ತೂ ಕಾಯೋಳೆ, ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ,
ಮದರ್ ಇಂಡಿಯಾ
ತಾಯಿಗೆ ಮಿಗಿಲಾದ ಗಾಡ್ ಇಲ್ಲ ಅಂತ ನಂಬಿರೋ ಸನ್ ಇಂಡಿಯಾ
ಬಾಯಿಗೆ ತುತ್ತಿಟ್ಟ ಮಮ್ಮೀಗೆ 
ಪ್ರಾಣ ನೀಡುವೆ ನೀ ಕಂಡೆಯಾ

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ


Tag: Kai tuttu kottole, Ee taayiya haartu mount everestu, 

ಕಾಮೆಂಟ್‌ಗಳಿಲ್ಲ: