ಶುಕ್ರವಾರ, ಸೆಪ್ಟೆಂಬರ್ 6, 2013

ರವಿ ನೀನು ಆಗಸದಿಂದಾ ಮರೆಯಾಗಿ ಹೋಗದೆ ನಿಲ್ಲೂರವಿ ನೀನು ಆಗಸದಿಂದಾ ಮರೆಯಾಗಿ ಹೋಗದೆ ನಿಲ್ಲೂ
ಬಾಳಲ್ಲಿ ಕತ್ತಲೆ ತುಂಬೀ, ನೀ ಓಡದೆ

ಕಡಲಿಂದ ನೀರನು ತರುವೆ, ಮಳೆಯಂತೆ ಭೂಮಿಗೆ ಸುರಿವೆ,
ನೆಲದಲ್ಲಿ ಹಸಿರನ್ನು ತುಂಬಿ,  ಸಂತೋಷ ಸಂಭ್ರಮ ಕೊಡುವೆ...
ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ.
ರವಿ ನೀನು ಆಗಸದಿಂದಾ ಮರೆಯಾಗಿ ಹೋಗದೆ ನಿಲ್ಲೂ
ಬಾಳಲ್ಲಿ ಕತ್ತಲೆ ತುಂಬೀ, ನೀ ಓಡದೆ

ರವಿ ನೀನೆ ಕಾಂತಿಯ ಜೀವ, ನೀ ನನ್ನ ಬಾಳಿನ ದೈವ,
ನೀ ದೂರವಾದರೆ ಹೀಗೆ, ನಾ ತಾಳಲಾರೆನು ನೋವಾ....
ಈ ನನ್ನ ಪ್ರೇಮದ ಹೂವಾ ನ ಮರೆವೆನೇ.....
ರವಿ ನೀನು ಆಗಸದಿಂದಾ ಮರೆಯಾಗಿ ಹೋಗದೆ ನಿಲ್ಲೂ
ಬಾಳಲ್ಲಿ ಕತ್ತಲೆ ತುಂಬೀ, ನೀ ಓಡದೆ

ಚಿತ್ರ: ಹೊಸ ಬೆಳಕು
ಸಾಹಿತ್ಯ: ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಜಾನಕಿ ಮತ್ತು ರಾಜ್ ಕುಮಾರ್
Tag: Ravi neenu aagasadinda mareyagi hogade nilloo, ravi neenu agasadinda mareyagi hogade nillu

ಕಾಮೆಂಟ್‌ಗಳಿಲ್ಲ: