ಶುಕ್ರವಾರ, ಸೆಪ್ಟೆಂಬರ್ 6, 2013

ಒಲಿದ ಜೀವ ಜೊತೆಯಲಿರಲು

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ

ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ಕರವ ಹಿಡಿದಾಗ ನಗುತ ನಡೆದಾಗ ಭುವಿಯೇ ಸ್ವರ್ಗದಂತೆ
ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ ಬದುಕು ಕವಿತೆಯಂತೆ
ಕಣ್ಣೀರು ಪನ್ನೀರ ಹನಿಯಂತೆ
ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ

ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ತುಳಿದ ಮುಳ್ಳೆಲ್ಲ ಅರಳಿ ಹೂವಂತೆ ಹಾದಿ ಮಿಟ್ಟಿಯಂತೆ
ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ
ಏನೊ ಉಲ್ಲಾಸ ಏನೊ ಸಂತೋಷ ಮರೆತು ಎಲ್ಲ ಚಿಂತೆ
ಒಲವಿಂದ  ದಿನವೊಂದು ಕ್ಷಣವಂತೆ
ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ
ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಈ ಬಾಳು ಸುಂದರ

ಚಿತ್ರ: ಬೆಂಕಿಯ ಬಲೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕಿ
Tag: Olida jiva jotheyaliralu, olida jeeva jotheyaliralu

ಕಾಮೆಂಟ್‌ಗಳಿಲ್ಲ: