ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾನೂ ನೀನೂ ನೆಂಟರಯ್ಯಾ

ವಿಠಲಾ....
ಪಾಂಡುರಂಗ ವಿಠಲಾ...
ನಾನೂ ನೀನೂ ನೆಂಟರಯ್ಯಾ
ನಮಗೆ ಭೇದ ಇಲ್ಲವಯ್ಯಾ
ನಾನೂ ನೀನೂ ನೆಂಟರಯ್ಯಾ
ನಮಗೆ ಭೇದ ಇಲ್ಲವಯ್ಯಾ
ವಿಠಲಾ....
ಪಾಂಡುರಂಗ ವಿಠಲಾ...
ವಿಠಲಾ ವಿಠಲಾ ವಿಠಲಾ

ಮಣ್ಣಲಿ ಮಡಿಕೆ, ಕುಡಿಕೆ ಮಾಡೋ
ಕಾಯಕ ಹಿಡಿದ ಕುಂಬಾರ ನಾನು....
ಮಣ್ಣಲಿ ಮಡಿಕೆ, ಕುಡಿಕೆ ಮಾಡೋ
ಕಾಯಕ ಹಿಡಿದ ಕುಂಬಾರ ನಾನು
ಜೀವಿಗಳೆಂಬೋ ಬೊಂಬೆಯ ಮಾಡೋ
ಬ್ರಹ್ಮನ ತಂದೆ ಕುಂಬಾರ ನೀನು
ಬ್ರಹ್ಮನ ತಂದೆ ಕುಂಬಾರ ನೀನು
ವಿಠಲಾ....
ಪಾಂಡುರಂಗ ವಿಠಲಾ...
ವಿಠಲಾ ವಿಠಲಾ ವಿಠಲಾ..
ನಾನೂ ನೀನೂ ನೆಂಟರಯ್ಯಾ
ನಮಗೆ ಭೇದ ಇಲ್ಲವಯ್ಯಾ

ಯಾಗವನೊಲ್ಲೆ, ಯೋಗವನೊಲ್ಲೆ
ರಾಗದೆ ಮುಳುಗೋ ವೈಭೋಗವೊಲ್ಲೆ
ಯಾಗವನೊಲ್ಲೆ, ಯೋಗವನೊಲ್ಲೆ
ರಾಗದೆ ಮುಳುಗೋ ವೈಭೋಗವೊಲ್ಲೆ
ಮಾಧವ, ನಿನ್ನ ನಾಮಾಮೃತದ
ಸಾಧನೆ ಒಂದೇ ಸಾಕಯ್ಯ ತಂದೆ
ಸಾಧನೆ ಒಂದೇ ಸಾಕಯ್ಯ ತಂದೆ
ಪುಂಡರೀಕವರದ ಜಯಪಾಂಡುರಂಗ
ಪಾಂಡುರಂಗವಿಠಲ ಜಯಪಾಂಡುರಂಗ
ವಿಠಲಾ....
ಪಾಂಡುರಂಗ ವಿಠಲಾ...
ಜೈ ಜಯ ವಿಠಲ
ಪುಂಡರೀಕವರದ
ಜೈ ಜಯ ವಿಠಲ

ಚಿತ್ರ: ಭಕ್ತಕುಂಬಾರ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಾಹಿತ್ಯ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್
Tag: Nanoo neenoo nentaraiaha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ