ಶನಿವಾರ, ಸೆಪ್ಟೆಂಬರ್ 7, 2013

ಯಾರಿಗೆ ಯಾರುಂಟು ಎರವಿನ ಸಂಸಾರ


ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲಾ ಹರಿಯೇ
ಯಾರಿಗೆ ಯಾರು

ಬಾಯಾರಿತು ಎಂದು ಬಾವಿ ನೀರಿಗೆ ಹೋದೆ
ಬಾವಿ ಜಲ ಬತ್ತಿ ಬರಿದಾಯ್ತೊ ಹರಿಯೇ
ಬಿಸಿಲಾ ತಾಳದೇ ಮರದ ನರಳಿಗೇ ಹೋದೆ
ಮರ ಬಗ್ಗಿ ಶಿರದ ಮೇಲೆ ಎರಗಿತೋ ಹರಿಯೇ
ಯಾರಿಗೆ ಯಾರು
ಅಡವಿಲಿ ಮನೆ ಮಾಡಿ ಗಿಡಕೆ ತೊಟ್ಟಿಲ ಕಟ್ಟೆ
ತೊಟ್ಟಿಲಿನ ಶಿಶುವೇ ಮಾಯವಾಯಿತೋ ಹರಿಯೇ
ತಂದೆ ಸಿರಿಪುರoದರ ವಿಠ್ಠಲರಾಯನೆ
ಮರೆಯದೇ ಎನ್ನನು ನೀನೇ ಸಲಹಯ್ಯಾ ಹರಿಯೇ

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೇ ನಿಜವಲ್ಲಾ ಹರಿಯೇ
ಯಾರಿಗೆ ಯಾರು

ಸಾಹಿತ್ಯ : ಶ್ರೀ ಪುರಂದರದಾಸರು

ಚಿತ್ರ: ಗಾಳಿಗೋಪುರ
ಸಂಗೀತ : ಟಿ.ಜಿ.ಲಿಂಗಪ್ಪ
ಗಾಯನ : ಘಂಟಸಾಲ


Tag: Yarige yaruntu eravina samsara

ಕಾಮೆಂಟ್‌ಗಳಿಲ್ಲ: