ಜೇನಿನ ಹೊಳೆಯೊ, ಹಾಲಿನ ಮಳೆಯೊ
ಜೇನಿನ ಹೊಳೆಯೊ, ಹಾಲಿನ
ಮಳೆಯೊ
ಸುಧೆಯೋ ಕನ್ನಡ
ಸವಿನುಡಿಯೊ
ವಾಣಿಯ ವೀಣೆಯ
ಸ್ವರಮಾಧುರ್ಯದ
ಸುಮಧುರ ಸುಂದರ
ನುಡಿಯೋ
ಕವಿನುಡಿ ಕೋಗಿಲೆ
ಹಾಡಿದ ಹಾಗೆ
ಸವಿನುಡಿ ತಣ್ಣನೆ
ಗಾಳಿಯ ಹಾಗೆ
ಒಲವಿನ
ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು
ಅರಳಿದ ಹಾಗೆ
ಮಕ್ಕಳು ನುಡಿದರೆ
ಸಕ್ಕರೆಯಂತೆ
ಅಕ್ಕರೆ ನುಡಿಗಳು
ಮುತ್ತುಗಳಂತೆ
ಪ್ರೀತಿಯ ನೀತಿಯ
ಮಾತುಗಳೆಲ್ಲಾ
ಸುಮಧುರ ಸುಂದರ
ನುಡಿಯೋ
ಕುಮಾರ ವ್ಯಾಸನ
ಕಾವ್ಯದ ಚೆಂದ
ಕವಿ ಸರ್ವಜ್ಞನ
ಪದಗಳ ಅಂದ
ದಾಸರು ಶರಣರು
ನಾಡಿಗೆ ನೀಡಿದ
ಭಕ್ತಿಯ ಗೀತೆಗಳ
ಪರಮಾನಂದ
ರನ್ನನು ರಚಿಸಿದ
ಹೊನ್ನಿನ ನುಡಿಯು
ಪಂಪನು ಹಾಡಿದ
ಚಿನ್ನದ ನುಡಿಯು
ಕನ್ನಡ ತಾಯಿಯು
ನೀಡಿದ ವರವು
ಸುಮಧುರ ಸುಂದರ ನುಡಿಯೋ
ಚಿತ್ರ: ಚಲಿಸುವ ಮೋಡಗಳು
ಸಾಹಿತ್ಯ: ಚಿ.
ಉದಯಶಂಕರ್
ಸಂಗೀತ: ರಾಜನ್
ಮತ್ತು ನಾಗೇಂದ್ರ
ಗಾಯನ: ರಾಜ್
ಕುಮಾರ್ ಮತ್ತು ಕಸ್ತೂರಿ ಶಂಕರ್
Tag: Jenina holeyo halina maleyo, Jenina holeyo haalina maleyo
ಕಾಮೆಂಟ್‌ಗಳು