ಶನಿವಾರ, ಸೆಪ್ಟೆಂಬರ್ 7, 2013

ರಘುಪತಿ ರಾಘವ ರಾಜಾರಾಂ

ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ

ನಿನ್ನಯ ಪಾವನ ಪುಣ್ಯನಾಮ
ನೆನೆಯುವ ದಿನವೇ ಶುಭ ದಿನವೂ
ನಿನ್ನಯ ಅಮೃತ ನುಡಿಗಳ ಮನದಿ
ಸ್ಮರಿಸಿದ ಕ್ಷಣವೇ ಮಂಗಳವು

ಭಾರತಮಾತೆಯ ಕೋಟಿ ವರುಷಗಳ
ತಪಸ್ಸು ನೀಡಿದ ಫಲನೀನು
ಭಾರತೀಯರ ದಾಸ್ಯ ಅಳಿಸಲು
ದೇವನು ತಂದ ವರ ನೀನು

ದ್ವೇಷ ಅಸೂಯೆ ಭೇದಭಾವವ
ತೊರೆಯಿರೆಂದು ಉಪದೇಶಿಸಿದೆ
ಸತ್ಯ ಅಹಿಂಸೆಯ ವ್ರತದ ಮಹಿಮೆಯ
ಜಗಕೆಲ್ಲಾ ನೀ ತೋರಿಸಿದೆ

ಚಿತ್ರ: ಗಾಂಧೀನಗರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯನ: ಪಿ.ಬಿ. ಶ್ರೀನಿವಾಸ್ ಮತ್ತು ಎಸ್ ಜಾನಕಿ
Tag: Raghupati Raghava Rajaram


ಕಾಮೆಂಟ್‌ಗಳಿಲ್ಲ: