ಬದುಕಿದೆನು ಬದುಕಿದೆನು
ಬದುಕಿದೆನು ಬದುಕಿದೆನು
ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲಿಮೆ ಎನಗಾಯಿತು
ಹರಿ ತೀರ್ಥ ಪ್ರಸಾದ ಜಿಹ್ವೆಗೆ ದೊರಕಿತು
ಹರಿಯ ನಾಮಾಮೃತವು ಕಿವಿಗೊದಗಿತು
ಹರಿಯ ದಾಸರು ಎನ್ನ ಬಂಧುಗಳಾದರು
ಹರಿಯ ಶ್ರೀ ಮುದ್ರೆ ಎನಗಾಭರಣವಾಯಿತು
ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನೋ
ಅಕಳಂಕ ಶ್ರೀ ಹರೀ, ಭಕುತಿಗೆ ಮನ ಬೆಳೆದು
ರುಕ್ಮಿಣಿ ಅರಸ ಕೈ ವಶನಾದನೆನಗೆ
ಇಂದೆನ್ನ ಜೀವಕ್ಕೆ ಸಕಲ ಸಂಪದವಾಯ್ತು
ಮುಂದೆನ್ನ ಜನ್ಮ ಸಾಫಲ್ಯವಾಯ್ತು
ತಂದೆ ಶ್ರೀ ಕಾಗಿನೆಲೆ ಆದಿ ಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ
ಸಾಹಿತ್ಯ: ಕನಕದಾಸರು
ಸಂಗೀತ: ಎಂ. ವೆಂಕಟರಾಜು
ಗಾಯನ: ಪಿ. ಬಿ. ಶ್ರೀನಿವಾಸ್
ಸಂಗೀತ: ಎಂ. ವೆಂಕಟರಾಜು
ಗಾಯನ: ಪಿ. ಬಿ. ಶ್ರೀನಿವಾಸ್
Tag: Badukideno badukideno bhava enage hingito
ಕಾಮೆಂಟ್‌ಗಳು