ಶನಿವಾರ, ಸೆಪ್ಟೆಂಬರ್ 7, 2013

ಎಲ್ಲೋ ಆದು ಎಲ್ಲೋ ಕಿವಿ ತುಂಬೋ ರಾಗ

ಎಲ್ಲೋ ಆದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಕೂಡಿನಲಿ ಹೊಸರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೆ ನನ್ನ ಮೈಪುಳಕ ನೆನಪೆ ನನ್ನ ಮೈಝಳಕ
ನೆನಪೆ ನನ್ನ ಧನಕನಕ ನೆನಪುವೊಂದೆ ಕೊನೆತನಕ

ನದಿಯ ಅಲೆಯಲ್ಲಿ ನಿನ್ನ ನಗೆಯಾ ಸವಿನೆನಪು
ಚಿಗುರೋ ಎಲೆಯಲ್ಲಿ ನಿನ್ನ ಲಜ್ಜೆಯ ಸವಿನೆನಪು
ತಿಂಗಳ ಬೆಳಕಿನ ಸುಖದಲಿ ನಿನ್ನ ಮುಖದಾ ಸವಿನೆನಪೂ
ರೆಪ್ಪೆ ತೇಲುವಾ ನೆನಪೇ ಚೈತ್ರ ಮಾಸವು
ತುಟಿಯ ತೆರೆಯುವಾ ನೆನಪೇ ಸುಪ್ರಭಾತವು
ಯಾರೋ ಬರೆದೋರು ನನ್ನೆದೆಯಾ ಲಾಲಿ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ರಂಗೋಲಿ

ಚಲಿಸೋ ಮೋಡದಲಿ ನಿನ್ನ ತಳುಕಿನ ಸವಿನೆನಪು
ಉಕ್ಕೋ ಕಡಲಲ್ಲಿ ನಿನ್ನ ಆಸೆಯ ಸವಿನೆನಪು
ಗುಡಿಯಲಿ ದೇವರದೀಪದಲಿ ನಿನ್ನ ಪ್ರತಿರೂಪದ ನೆನಪೂ
ಚೆಲುವು ತೆರೆಯುವಾ ನೆನಪೇ ಪ್ರೇಮದರ್ಥವು
ಹೃದಯ ತೆರೆಯುವಾ ನೆನಪೇ ಬಾಳಿಗರ್ಥವು

ಚಿತ್ರ: ಕನಸುಗಾರ
ಸಾಹಿತ್ಯ: ಕೆ ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ


Tag: Ello adu ello kivi tumbo raga

ಕಾಮೆಂಟ್‌ಗಳಿಲ್ಲ: