ಶುಕ್ರವಾರ, ಸೆಪ್ಟೆಂಬರ್ 6, 2013

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ

ಹಾಡೋ ಚಿಲಿಪಿಲಿ ಹಕ್ಕಿಗಳೆ
ಪ್ರೀತಿಯ ಭಾಷೆ ಕೇಳಿರಿ
ಕಣ್ಣಿನಂಥ ಅಣ್ಣನು
ತಾಯಿಯಾದನು ನೋಡಿರಿ
ಶಿಲುಬೆಯನೇ ಏರಿದರೂ ನಗುವಿನ ಒಲುಮೆ ತುಂಬಿದೆ
ಹಾರಾಡೋ ಮನಸೀಗೆ ಆಕಾಶವೆ ನೀನಾದೆ
ಈ ಕಣ್ಗಳೇ ಕೊಡೆಯಾಗಲಿ
ಕಣ್ಣಿನ ಹನಿಯಲ್ಲೇ ಹೃದಯಕೆ ಹೂಮಳೆ

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ

ನಮ್ಮ ಬಂಧ ಅನುಬಂಧ
ಸ್ವರ್ಗವೇ ನಾಚುವ ಹಾಗಿದೆ
ಗಿಲ್ಲಿ ಮೊಗ್ಗು ಅರಳಿದರೆ
ಹೂವಿಗೆ ಸಾವಿರ ವರ್ಷವೇ
ಕಣ್ಣೆರಡೂ ಇರಬಹುದು
ನೋಟಗಳೊಂದೇ ಅಲ್ಲವೇ
ರೂಪಗಳು ಎರಡೆರಡು
ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ
ಇದು ಅಣ್ಣನಾಶಯ
ನೀ ಹೇಳೋ ಶುಭಾಶಯ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ

ಚಿತ್ರ: ಯಜಮಾನ
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ, ರಾಜೇಶ್ ಕೃಷ್ಣನ್, ಚಿತ್ರTag: Namma maneyali dinavoo mirugo chaitrave, yajamaana


ಕಾಮೆಂಟ್‌ಗಳಿಲ್ಲ: