ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಹಾ ಎಂಥಾ ಸಮಯ ಬಂದಿದೆ

ಆಹಾ ಎಂಥಾ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ ಎಂಥಾ ಸಮಯಬಂದಿದೆ

ಮತ್ಸ್ಯನಾಗಿ ಕಡಲಿಳಿದು ವೇದವ ಉದ್ಧರಿಸಿದ
ಕೂರ್ಮನಾಗಿ ಗಿರಿಯ ಹೊತ್ತು ಅಮೃತವನೇ ನೀಡಿದ
ವರಾಹನಾಗಿ ಮುಳುಗಿದ್ದ ಭೂಮಿಯ ಮೇಲೆತ್ತಿದ
ನಾರಸಿಂಹನಾಗಿ ಬಾಲ ಪ್ರಹ್ಲಾದನ ಸಲಹಿದಾ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ ಎಂಥಾ ಸಮಯಬಂದಿದೆ

ವಾಮನಾವತಾರ ತಾಳಿ ಬಲಿಯ ಗರ್ವ ಮುರಿದವ
ಪರಶುರಾಮನಾಗಿ ಹಗೆಯ ರಾಜರುಗಳ ಅಳಿಸಿದ
ರಾಮನಾಗಿ ಲೋಕಕ್ಕೆಲ್ಲಾ ಆದರ್ಶವ ತೋರಿದ
ಕೃಷ್ಣನಾಗಿ ಭೂಭಾರವನಿಳಿಸಲು ತಾ ಬಂದಿಹಾ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ ಎಂಥಾ ಸಮಯಬಂದಿದೆ

ಯಾರ ಪುಣ್ಯವೋ ದಿವ್ಯ ದರುಶನ ನಿಮಗಾಗಿದೆ
ಪರಮ ಪುಣ್ಯವಂತನಿಗೆ ವಶವಾಗಲು ಕಾದಿದೆ
ಕೋಟಿ ವರುಷ ತಪಗೈದರು ಸಿಗದ ಪರಂಜ್ಯೋತಿಯೂ
ನಿಮ್ಮ ಮುಂದೆ ರೂಪುತಾಳಿ ನಿಂತಿದೆ ಕೈವಲ್ಯವು
ಆಹಾ ಎಂಥಾ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ ಎಂಥಾ, ಆಹಾ ಎಂಥಾ,
ಆಹಾ ಎಂಥಾ  ಸಮಯಬಂದಿದೆ

ಚಿತ್ರ: ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ
ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ಆರ್. ಸುದರ್ಶನಂ
ಗಾಯನ: ಪಿ. ಬಿ. ಶ್ರೀನಿವಾಸ್
Tag: Aaaha enthaa samaya bandide, aha enta samaya bandide





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ