ಶುಕ್ರವಾರ, ಸೆಪ್ಟೆಂಬರ್ 6, 2013

ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ

ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಮುಂಜಾನೇ ಮಂಜಂತೇ
ಜಗವೆಲ್ಲಾ ಹೊಸದಂತೇ
ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ

ಕಾಡಿಗೆ ಕಣ್ಣೋಳ, ಕುಡಿನೋಟದೆ
ಮನದಲ್ಲಿ ನೂರಾಸೆ ಮಿಂಚಾಗಿದೆ
ಒಡನಾಡಿಯ, ಸಿಹಿಮಾತಿಗೆ
ಬಯಕೆ ಗರಿಬಿಚ್ಚಿ ಹಾರಾಡಿದೆ
ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಮುಂಜಾನೇ ಮಂಜಂತೇ
ಜಗವೆಲ್ಲಾ ಹೊಸದಂತೇ
ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ

ಸ್ನೇಹಕೆ ಸೋತೆ, ಸನಿಹಕೆ ಬಂದೆ
ದಾಹ ಹೊಸದೊಂದು ತಾ ಮೂಡಿದೆ
ಹಾಲು ಜೇನು, ರುಚಿಸದು ಇನ್ನು
ನಿನ್ನ ನುಡಿಮುತ್ತೆ ಸವಿಯಾಗಿದೆ
ನೀ ಜೊತೆಯಿರಬೇಕು, ನಾ ನಗುತಿರಬೇಕು
ನಿನ್ನಯ ಮಡಿಲಲ್ಲಿ, ಎಂದಿಗು ಇರಬೇಕು
ನಮಗೆ ಬೇರೇನು ಬೇಕಿಲ್ಲ
ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಮುಂಜಾನೇ ಮಂಜಂತೇ
ಜಗವೆಲ್ಲಾ ಹೊಸದಂತೇ
ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ

ಪ್ರೇಮದ ಅಲೆಯಲ್ಲೀ, ಈಜಾಡಲು
ಉಲ್ಲಾಸ ಮೈಯೆಲ್ಲ ಓಡಾಡಿದೆ
ಹೊಂಬಿಸಿಲಲೀ, ಮೈಕಾಯಿಸೀ
ಮನಸು ಹಗುರಾಗಿ ಹಾಯಾಗಿದೆ
ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಮುಂಜಾನೇ ಮಂಜಂತೇ
ಜಗವೆಲ್ಲಾ ಹೊಸದಂತೇ
ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ

ಚಿತ್ರ: ನಾನಿರುವುದೇ ನಿನಗಾಗಿ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು  ಎಸ್.ಜಾನಕಿ

Tag: Nannallu ninnallu bandada prema, nannalloo ninnalloo bandaada prema

ಕಾಮೆಂಟ್‌ಗಳಿಲ್ಲ: