ಗುರುವಾರ, ಸೆಪ್ಟೆಂಬರ್ 5, 2013

ಪುಸ್ತಕಪುಸ್ತಕ


ಪುಸ್ತಕ ಮಾತನು ಹೇಳುತಿದೆ
ಚಿತ್ತವ ಹತ್ತಿಸಿ ಕೇಳು
ಒಳ್ಳೆಯ ಕಡೆಯಲಿ ಇಡು ನನ್ನ
ಬೀರೂ ಪೆಟ್ಟಿಗೆ ಬಲು ಚೆನ್ನ

ಬೀಳದೆ ಧೂಳು ಇಹಪರಿ ಮೇಲೆ
ಬೇರೊಂದಟ್ಟೆಯ ಹೊಂದಿಸು, ಮಗು
ಜನಗಳ ಕಾಲಡಿ ಹಾಕದಿರು
ಕಿವಿಗಳ ನಿತ್ಯ ಮಡಿಸದಿರು

ಹಾಳೆಯ ಮಡಿಸಿ ಬೋರಲು ಇರಿಸಿ
ಕಷ್ಟಕೆ ಸಿಕ್ಕಿಸಬೇಡ, ಮಗು
ನನ್ನಯ ತಿರುಳು ಕಾಡಿನದು
ನನ್ನಯ ಅರಿವು ನಾಡಿನದು

ಬೆಂಕಿಲಿ ಬೆಂದು ನೀರಲಿ ನೆಂದು
ಯಂತ್ರವ ಹೊಕ್ಕು ಬಂದೆ, ಮಗು
ಏನೊಂದಾದರು ಕೇಳು, ಮಗು
ಯಾವಾಗೆಂದರೆ ಹೇಳುವೆನು
ಬೇಸರವಿಲ್ಲದೆ ಸೇವಿಪೆನಲ್ಲವೆ
ನನ್ನೇಕಿನ್ನೂ ನೋಯಿಸುವೆ?

ತೂಕಡಿಸುತ್ತಾ ಮುಟ್ಟದಿರು
ಅರೆಗಣ್ಣಾಗಿರೆ ತೆರೆಯದಿರು
ಕಡ್ಡಿಯ ಸಿಕ್ಕಿ ತಲೆಯಡಿ ಅಡಕಿ
ಗೊರಕೆಯ ಹೊಡೆಯದೆ ಇರು ಮಗುವೆ

ಮೇಜಿನ ಮೇಲೆ ಚೌಕವಿದೆ
ಮೊಗಮೇಲಾಗಿಡು, ಹೂವು ಇಡು
ಕೈಗಳ ತೊಳೆದು ಚೌಕದಿ ತೊಡೆದು
ಆಮೇಲೆನ್ನನು ಓದು ಮಗು

ಸಾಹಿತ್ಯ: ಹೊಯಿಸಳ
(ಚಂದಮಾಮ ಸಂಕಲನದಿಂದ)

Photo Courtesy: unitedway4u.org

Tag: Pustaka maatanu helutide

ಕಾಮೆಂಟ್‌ಗಳಿಲ್ಲ: