ಶನಿವಾರ, ಸೆಪ್ಟೆಂಬರ್ 7, 2013

ಒಂದೇ ಉಸಿರಂತೆ ಇನ್ನು ನಾನು ನೀನು

ಹಾಡು ಹಾಡು ಒಂದು ಹಾಡು ಹಾಡು
ಹಾಡದಿದ್ದರೆ ನನ್ನ ಹಾಡು ಕೇಳು
ಉಸಿರು ಕಟ್ಟಿ ಹಾಡುವೆ ಈ ಹಾಡು
ಈ ಉಸಿರು ನಿಂತರೇ ನಿನಗೆ ನಷ್ಟ ನೋಡು

ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು
ನೀನೆ ನಾನು ನಾನೆ ನೀನು
ಒಂದೆ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು
ಬೇರೆ ಅಂದರೆ ಅರ್ಥ ಏನು
ಹಾಡೆ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು
ಅಂಜಿಕೆಯೇನು ಅಳುಕಿನ್ನೇನು
ಕೇಳೆ ಕೋಗಿಲೆ ನನ್ನಾ ಕೊರಳಿನಲ್ಲಿ
ನಿನ್ನ ಹೆಸರೇ ಕೊನೆಯಾ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಅಲ್ಲ ಇನ್ನು
ನೀನೆ ನಾನು ನಾನೆ ನೀನು
ಎತ್ತಾ ಇತ್ತೋ ಎಂತು ಬಂತೋ ಕಾಣೆ ನಾನು
ಒಂದೇ ಧೈರ್ಯ ಒಂದೇ ಹುರುಪು
ಹಾಡೋ ಹಂಬಲ ತಂದೆ ನೀನು
ಕೋಟಿ ಕೋಗಿಲೆ ಒಂದೇ ಉಸಿರಿನಲಿ
ಪ್ರೀತಿ ಮಾಡು ಪ್ರೀತಿಯ ಬೇಡು
ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
ಅಂತರಂಗದಾ ಸಹ್ಯಾದ್ರಿ ಮಡಿಲಲ್ಲಿ
ನೂರು ನವಿಲಾಗಿ ಹೃದಯ ಹಾಡಿದೆ ಹಾಡಿದೆ
ಕುಣಿದಿದೆ ಕುಣಿದಿದೆ ಕಾದಿದೆ ಕಾದಿದೆ
ಪ್ರೀತಿ ನೀಡು
ಒಂದೆ ಉಸಿರಲಿ ನಿಂತಿದೆ ನಿಂತಿದೆ
ಇಂದು ಪ್ರೀತಿಯು ಹಾಡಿದ ಪರ್ವ ದಿನ
ಅದ ಕೇಳಲು ದಕ್ಕಿದ ಪುಣ್ಯ ದಿನ
ಅದು ಬೆಳಕಂತೆ ಮುಟ್ಟಲಾಗದಂತೆ
ಬೆಳದಿಂಗಳಂತೆ ಅಪ್ಪಲಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ
ನೀನೆ ನನ್ನೀ ಪ್ರೀತಿಯ ಒಡತಿ
ಬ್ರಹ್ಮ ಬಾರಿ ಜಾಣ ಜಾಣ
ನಾರೀಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೆ ಪ್ರೀತಿಯ ರೂಪ
ನೀನೆ ತಾನೆ ಹೃದಯದ ದೀಪ
ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ
ಗಾಳಿ ಅಲ್ಲ ಮಳೆಯು ಅಲ್ಲ
ಭೂಮಿ ಬಿರಿದರು ಆರೋದಿಲ್ಲ
ಒಂದೆ ದೀಪದಂತೆ ಇನ್ನು ನಾನು ನೀನು
ಎಣ್ಣೆ ದಾರ ಬೇರೆ ಏನು
ಬೇರೆ ಅಂದರೆ ಅರ್ಥ ಏನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗೂ ಹೋಲಿಸು
ಚಂದಮಾಮನೇ ಕೇಳೋ ನಮ್ಮಾಣೆಯಾ
ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು
ಎಂದಿಗು ಆಗದು ಆಗುವುದಾದರೆ ಇಂದೇ ಆಗಲಿ
ಆಗುವ ಮೊದಲೆ ಪ್ರಾಣ ಹೋಗಲಿ
ಚಂದನ ಚಂದನ ಕಂಪಿನ ಚಂದನ
ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ
ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನಿನ್ನೀ ಪ್ರೀತಿಯ ಜೀವನ ಚೇತನ
ಗಾಯನ ಗಾಯನ
ಅಯನ ಅಯನ ನಿನ್ನಾ ನೆರಳಲ್ಲಿ
ನನ್ನೀ ಜನುಮದ ಪ್ರೇಮಾಯಣ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ
ಕಲ್ಲಿರಲಿ ಕಲ್ಲು ಮುಳ್ಳಿರಲಿ
ನಡೆ ಮಳೆ ಇರಲಿ ನಡೆ ಬಿಸಿಲಿರಲಿ
ಪ್ರೇಮಾಯಣಕೆ ನಿನ್ನ ನೆರಳಿರಲಿ
ಜನುಮಾಯಣಕೆ ನಿನ್ನ ಕೊರಳಿರಲಿ
ಭಯವಿಲ್ಲ ಇನ್ನು ಭಯವಿಲ್ಲ
ನನ್ನ ನಿರ್ಧಾರ ಇನ್ನು ನನದಲ್ಲ
ನನ್ನಾ ಎದೆಯಲ್ಲೊಬ್ಬಾ ಚಂದ್ರ
ಬೆಳ್ಳೀ ಬೆಳಕ ತಂದಾ ತಂದಾ
ಪ್ರೀತಿ ಅಂದರೇನು ಅಂದ
ಕೇಳಿ ತಾನೆ ಉತ್ತರ ತಂದ
ಸ್ವಚ್ಚ ಬಿಳುಪಿನಂತೆ ಇನ್ನು ನಾನು ನೀನು
ಏಳು ಬಣ್ಣ ಸೇರಿ ಬಿಲ್ಲು ಆದ ಹಾಗೆ ನೀನು ನಾನು
ಒಂದೆ ಹಾಡಂತೆ ಇನ್ನು ನಾನು ನೀನು
ಎಲ್ಲಾ ಭಾವ ಕೂಡಿಕೊಂಡ
ಬಾಳಿನಂತೆ ನಾನು ನೀನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೋ ನಮ್ಮಾಣೆಯಾ
ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು
ಎಂದೂ ಆಗದು ಆಗುವುದಾದರೆ ಇಂದೇ ಆಗಲಿ
ಆಗುವ ಮೊದಲೆ ಪ್ರಾಣ ಹೋಗಲಿ

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ


Tag: Onde usirante innu naanu neenu

ಕಾಮೆಂಟ್‌ಗಳಿಲ್ಲ: