ಗುರುವಾರ, ಸೆಪ್ಟೆಂಬರ್ 5, 2013

ದೀಪ ದೀವಳಿಗೆ ಜೋಳಿಗೆ ತುಂಬಾ ಹೋಳಿಗೆ


“ದೀಪ ದೀವಳಿಗೆ ಜೋಳಿಗೆ ತುಂಬಾ ಹೋಳಿಗೆ”.

ಈ ಲೋಕದಲ್ಲಿ ಸಕಲರ ಬದುಕು ದೀಪಗಳ ಬೆಳಕಿನಿಂದ ಪ್ರಜ್ವಲಿಸುತ್ತಾ, ಸಂತಸ, ಸೌಖ್ಯ, ಸೌಭಾಗ್ಯ ಯುಕ್ತವಾಗಿಯೂ, ಕ್ಲೇಶರಹಿತವಾಗಿಯೂ ಇರಲೆಂದು ಆಶಿಸುತ್ತಾ, ದೀಪಗಳ ಹಬ್ಬ ದೀಪಾವಳಿಯ ಸಂದರ್ಭದಲ್ಲಿ  ಶುಭ ಕೋರೋಣ.

ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನ ಸಂಪದಾಃ
ಶತ್ರು ಬುದ್ಧಿ ವಿನಾಶಾಯ
ದೀಪಜ್ಯೋತಿ ನಮೋಸ್ತುತೆ

ಲೋಕಕಲ್ಯಾಣವನ್ನೂ, ಆರೋಗ್ಯ ಭಾಗ್ಯವನ್ನೂ, ಅಗತ್ಯವಾದ  ಸೌಕರ್ಯ ಸಂಪದಗಳನ್ನೂ  ದಯಪಾಲಿಸಿ ಶತ್ರುಬುದ್ಧಿಯನ್ನು ಹೋಗಲಾಡಿಸುವ  ದೀಪಜ್ಯೋತಿಗೆ ನಾವು ನಮಿಸೋಣ.

ದೀಪಜ್ಯೋತಿ ಪರಬ್ರಹ್ಮ
ದೀಪಜ್ಯೋತಿ ಜನಾರ್ಧನ
ದೀಪೋ ಮೆ ಹರ ತು ಪಾಪಂ
ಸಂಧ್ಯಾ ದೀಪ ನಮೋಸ್ತುತೆ

ಸಮಸ್ತ ಸೃಷ್ಟಿಯನ್ನು ಪೊರೆಯುವಪರಬ್ರಹ್ಮ ಸ್ವರೂಪಿ ಜನಾರ್ಧನನಿಗೆ ದೀಪರೂಪದಲ್ಲಿ ನಮ್ಮ ನಮನಗಳನ್ನು ಸಲ್ಲಿಸಿ, ನಾವು ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಂದ ಉಂಟಾದ ಕ್ಲೇಶಗಳಿಂದ ನಮ್ಮನ್ನು ಮುಕ್ತರಾಗಿಸಿ,  ಸರಿದಾರಿಯಲ್ಲಿ ಎಮ್ಮ  ನಡೆಸಿ ಪೊರೆಯೆಂದು ಭಕ್ತಿಪೂರ್ವಕವಾಗಿ  ಪ್ರಾರ್ಥಿಸೋಣ.

ನಮ್ಮ ಎಲ್ಲ ಬಂಧುಗಳಿಗೂ ದೀಪಾವಳಿ ಹಬ್ಬದ ಶುಭ ಹಾರೈಕೆಗಳು.  ನಮ್ಮ ನಿಮ್ಮ ಬಾಂಧವ್ಯ ಚಿರಕಾಲ ಜ್ವಾಜ್ಯಲ್ಯಮಯವಾಗಿ ಪ್ರಶಾಂತಿಯಿಂದ ಕಂಗೊಳಿಸುತ್ತಿರಲಿ ಎಂಬುದು ನಮ್ಮ ಆಶಯ.

Tag: Deepa deevalige jolige tumba holige

ಕಾಮೆಂಟ್‌ಗಳಿಲ್ಲ: