ಕಂಜದಳಾಯತಾಕ್ಷಿ
ಕಂಜದಳಾಯತಾಕ್ಷಿ
ಕಂಜದಳಾಯತಾಕ್ಷಿ ಕಾಮಾಕ್ಷಿ ಕಮಲಾಮನೋಹರಿ ತ್ರಿಪುರಸುಂದರಿ
ಕುಂಜರಾಗಮನೇ ಮಣಿಮಂಡಿತ ಮಂಜುಳಕರ್ಣೆ ಮಾಮವಶಿವ ಪಂಜರಾಶುಕಿ
ಪಂಕಜಮುಖಿ ಗುರುಗುಹ ರಂಜನಿ ನಿರಂಜನಿ ದುರಿತಭಂಜನಿ
ರಾಕಾಶಶಿವದನೆ ಸುರದನೆ ರಕ್ಷಿತಮದನೇ ರತ್ನಸದನೇ
ಶ್ರೀಕಂಚಿನವಾಸನೇ ಸುರಸನೇ ಶೃಂಗಾರಾಶ್ರಯ ಮಂದಹಸನೇ ಏಕಾನೇಕಾಕ್ಷರಿ
ಭುವನೇಶ್ವರಿ ಏಕಾನಾನಂದಾಮೃತ ಝರಿ ಭಾಸ್ವರಿ ಏಕಾಗ್ರಮನೋಲಯಕರಿ ಶ್ರೀಕರಿ
ಏಕಾಮ್ರೇಶಗೃಹೇಶ್ವರಿ ಶಂಕರಿ
ಸಾಹಿತ್ಯ: ಮುತ್ತುಸ್ವಾಮಿ ದೀಕ್ಷಿತರು
(ಓ ಕಾಮಾಕ್ಷಿ, ನಿನ್ನ ನೇತ್ರಗಳು ತಾವರೆಯ ದಳಗಳಂತೆ ಶೋಭಿಸುತ್ತಿವೆ. ನೀನು ಲಕ್ಷ್ಮಿಯ ಆತ್ಮೀಯ ಗೆಳತಿ. ನೀನು ಅತ್ಯಂತ ಸುಂದರಳಾದ ತ್ರಿಪುರ ಸುಂದರಿ.
ನಿನ್ನ ಗಮನವು ಆನೆಯ ಗಾಂಭೀರ್ಯದ ನಡೆಯಂತಹದ್ದು. ರತ್ನಗಳ ರಾಶಿಯಿಂದ ನಿನ್ನ ಪಾದಗಳು ಅಲಂಕೃತಗೊಂಡಿವೆ. ದಯಮಾಡಿ ಎನ್ನನು ರಕ್ಷಿಸು. ನೀನು ಶಿವನ ಹೃದಯದ ಗಿಣಿಯಂತಹವಳು. ನಿನ್ನ ಮುಖ ಕಮಲದಂತೆ ಶೋಭಿಸುತ್ತಿರುವುದು. ನೀನು ಗುರುಗುಹನ ಆನಂದದಾಯಕಿ. ಎಲ್ಲಾ ಪಾಪಗಳನ್ನೂ ಪರಿಹರಿಸುವವಳು.
ನಿನ್ನ ಮುಖವು ಹುಣ್ಣಿಮೆಯ ಚಂದ್ರನಂತೆ ಶೋಭಿಸುತ್ತಿದೆ. ನಿನ್ನ ದಂತಪಂಕ್ತಿ ಮುತ್ತಿನಂತೆ ಹೊಳೆಯುತ್ತಿದೆ. ನೀನು ಮನ್ಮಥನನ್ನು ರಕ್ಷಿಸಿದವಳು. ನಿನ್ನ ಸಿಂಹಾಸನವೂ ರತ್ನಾಭರಿತವಾಗಿ ಪ್ರಕಾಶಿಸುತ್ತಿದೆ. ನಿನ್ನ ವಸ್ತ್ರವು ಸ್ವರ್ಣಾಲಂಕೃತವಾಗಿದ್ದು ಶ್ರೀಮಂತವಾಗಿದೆ. ನಿನ್ನ ಹೃದಯವು ಪ್ರೇಮದಿಂದ ತುಂಬಿದ್ದು ನಿನ್ನ ಮುಗುಳ್ನಗೆಯು ಆನಂದದಾಯಕವಾಗಿದೆ. ನೀನು ವಿಶ್ವದ ಪರಮ ದೇವೆತೆಯಾಗಿದ್ದು ನಿನ್ನನ್ನು ಒಂದಕ್ಷರದಿಂದಲೂ ಬಹು ಅಕ್ಷರಗಳಿಂದಲೂ ಪೂಜಿಸಬಹುದಾಗಿದೆ. ನೀನು ಪರಮಾನಂದವೆಂಬ ಜೇನಿನ ಹೊಳೆಯಾಗಿದ್ದು ಪ್ರಕಾಶಮಾನೆಯಾಗಿರುವೆ. ನೀನು ಸಂಪತ್ತನ್ನು ನೀಡುವಾಕೆ. ನೀನು ಶಂಕರಿ ಏಕಾಮ್ರೇಶ್ವರ ಶಿವನ ಅರಸಿ.)
Tag: Kanjadalayataakshi
Tag: Kanjadalayataakshi
ಕಾಮೆಂಟ್‌ಗಳು