ಶುಕ್ರವಾರ, ಅಕ್ಟೋಬರ್ 4, 2013

ಮಾಣಿಕ್ಯವೀಣಾಮುಫಲಾಲಯಂತೀಂ


ಮಾಣಿಕ್ಯವೀಣಾಮುಫಲಾಲಯಂತೀಂ
ಮದಾಲಸಾಂ ಮಂಜುಲವಾಗ್ವಿಲಾಸಾಂ |
ಮಾಹೇಂದ್ರನೀಲದ್ಯುತಿಕೋಮಲಾಂಗೀಂ
ಮಾತಂಗಕನ್ಯಾಂ ಮನಸಾಸ್ಮರಾಮಿ ||

ಮಾಣಿಕ್ಯವೀಣೆಯನ್ನು ಪ್ರೀತಿಯಿಂದ ನುಡಿಸುತ್ತಿರುವ, ಮದದಿಂದ ಆಲಸಳಾಗಿರುವ, ಮಧುರವಾದ ಮಾತಿನ ವಿಲಾಸವುಳ್ಳ, ಕಾಂತಿಯೊಡಗೂಡಿ ನೀಲಬಣ್ಣದ ಮೋಡದಂತಹ ಶರೀರವುಳ್ಳ, ಮತಂಗ ಋಷಿಯ ಕನ್ಯೆಯನ್ನು ಯಾವಾಗಲೂ ಸ್ಮರಿಸುತ್ತೇನೆ.


ಚತುರ್ಭುಜೇ ಚಂದ್ರಕಲಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ |
ಪುಂಡ್ರೇಕ್ಷುಪಾಶಾಂಕುಶಪುಷ್ಪಬಾಣಹಸ್ತೇ
ನಮಸ್ತೇ  ಜಗದೇಕಮಾತಃ. ||

ನಾಲ್ಕು ಭುಜಗಳುಳ್ಳ, ಚಂದ್ರಕಲೆಯನ್ನು ಮುಡಿದಿರುವ ಕುಂಕುಮದಂತೆ ಕೆಂಪುಬಣ್ಣದ ವಕ್ಷಸ್ಥಲವಿರುವ, ಕಬ್ಬಿಣ ಜಲ್ಲೆ, ಪಾಶ, ಅಂಕುಶ, ಹೂವಿನ ಬಾಣಗಳನ್ನು ಕೈಯಲ್ಲಿ ಧರಿಸಿರುವ, ಜಗತ್ತಿನ ಒಬ್ಬಳೇ ತಾಯಿಯಾದ ನಿನಗೆ ನಮಸ್ಕಾರ.


ಸರ್ವತೀರ್ಥಾತ್ಮಿಕೇ, ಸರ್ವಮಂತ್ರಾತ್ಮಿಕೇ,
ಸರ್ವತಂತ್ರಾತ್ಮಿಕೇ, ಸರ್ವಯಂತ್ರಾತ್ಮಿಕೇ,
ಸರ್ವಪೀಠಾತ್ಮಿಕೇ, ಸರ್ವತತ್ವಾತ್ಮಿಕೇ,
ಸರ್ವಯೋಗಾತ್ಮಿಕೇ, ಸರ್ವನಾದಾತ್ಮಿಕೇ,
ಸರ್ವಶಬ್ದಾತ್ಮಿಕೇ, ಸರ್ವವಿಶ್ವಾತ್ಮಿಕೇ,
ಸರ್ವದೀಕ್ಷಾತ್ಮಿಕೇಸರ್ವಸರ್ವಾತ್ಮಿಕೇ,
ಸರ್ವಗೇ ಪಾಹಿ ಮಾಂ,
ಪಾಹಿ ಮಾಂ, ದೇವಿ ತುಭ್ಯಂ ನಮೋ,
ದೇವಿ ತುಭ್ಯಂ ನಮೋ, ದೇವಿ ತುಭ್ಯಂ ನಮಃ


ಎಲ್ಲ ತೀರ್ಥಸ್ವರೂಪಳೇ, ಎಲ್ಲ ಮಂತ್ರಗಳ ಮೂರ್ತಿಯೇ, ಎಲ್ಲ ತಂತ್ರಗಳ ರೂಪಳೇ, ಎಲ್ಲ ಯಂತ್ರಗಳನ್ನೂ ಮೂರ್ತಿಯಾಗಿ ಉಳ್ಳವಳೇ, ಎಲ್ಲ ಪೀಠಗಳ ಅಧಿಷ್ಠಾತ್ರಿ, ಎಲ್ಲ ತತ್ವಗಳ ಮೂಲವಾಗಿ ಇರುವವಳೇ, ಎಲ್ಲ ಶಕ್ತಿಗಳ ಸ್ವರೂಪಳೇ, ಎಲ್ಲ ಯೋಗಗಳ, ಎಲ್ಲ ನಾದಗಳ, ಎಲ್ಲ ಶಬ್ದಗಳ, ಎಲ್ಲ ವಿಶ್ವದ, ಎಲ್ಲದರ ಆತ್ಮವಾಗಿರುವವಳೇ, ಎಲ್ಲೆಡೆಯಲ್ಲಿಯೂ ಇರುವವಳೇ ನನ್ನನ್ನು ಕಾಪಾಡು, ನನ್ನನ್ನು ಪೊರೆ, ಪಾಹಿ ಮಾಂ, ದೇವಿ ನಿನಗೆ ನಮಸ್ಕಾರ, ದೇವಿ ನಿನಗೆ ನಮಸ್ಕಾರ, ದೇವಿ ನಿನಗೆ ನಮಸ್ಕಾರ.


Tag: Manikyaveenamupalalayanteem