ಸೋಮವಾರ, ಅಕ್ಟೋಬರ್ 14, 2013

ತಿರುಪತಿ ಗಿರಿವಾಸ ಶ್ರೀವೆಂಕಟೇಶ

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶೀಮದ್ ವೆಂಕಟನಾಥಾಯ ಶ್ರೀನಿವಾಸಾಯ ತೇ ನಮಃ

ತಿರುಪತಿ ಗಿರಿವಾಸ ಶ್ರೀವೆಂಕಟೇಶ
ನೀನೊಲಿದ ಮನೆ ಮನೆಯೂ ಲಕ್ಷ್ಮೀನಿವಾಸ

ಅಖಿಲಾಂಡ ಕೋಟಿ ಬ್ರಹ್ಮಾಂಡಪಾಲ
ಅಲಮೇಲುಮಂಗಾ ಮನೋಲ್ಲಾಸಲೋಲ
ತಿರುಪತಿ ಗಿರಿವಾಸ ಶ್ರೀವೆಂಕಟೇಶ
ನೀನೊಲಿದ ಮನೆ ಮನೆಯೂ ಲಕ್ಷ್ಮೀನಿವಾಸ

ಪಂಕಜಲೋಚನ ಪತಿತೋದ್ಧಾರ
ಸಂಕಟಹರಣ ಸುಧಾರಸಧಾರ
ಶಂಖ ಚಕ್ರಧರ ಶ್ರೀಕರ ಸುಂದರ
ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರಸಾರ ಸಕಲ ಸೂತ್ರಧಾರ
ಶಿರಸಾ ನಮಾಮಿ ಮನಸಾ ಸ್ಮರಾಮಿ
ತಿರುಪತಿ ಗಿರಿವಾಸ ಶ್ರೀವೆಂಕಟೇಶ
ನೀನೊಲಿದ ಮನೆ ಮನೆಯೂ ಲಕ್ಷ್ಮೀನಿವಾಸ
ತಿರುಪತಿ ಗಿರಿವಾಸ ಶ್ರೀವೆಂಕಟೇಶ, ಶ್ರೀವೆಂಕಟೇಶ

ಚಿತ್ರ: ಶ್ರೀಕೃಷ್ಣದೇವರಾಯ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ, ಎಸ್. ಜಾನಕಿ ಮತ್ತು ಸಂಗಡಿಗರು


ಕಾಮೆಂಟ್‌ಗಳಿಲ್ಲ: