ಶುಕ್ರವಾರ, ಆಗಸ್ಟ್ 15, 2014

ಭರತಭೂಮಿ ನನ್ನ ತಾಯಿ


ಭರತಭೂಮಿ ನನ್ನ ತಾಯಿ, ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ, ಬಿಡುತೆ ಗುಡಿಯ ಕಟ್ಟಲು

ತುಹಿನ ಗಿರಿಯ ಸಿರಿಯ ಮುಡಿಯ, ಹಿರಿಯ ಕಡಲು ತೊಳೆಯುವಡಿಯ
ಪೈರುಪಚ್ಚೆ ಪಸುರಿನುಡೆಯ, ಭರತಭೂಮಿ ನನ್ನ ತಾಯಿ

ಸಿಂಧು ಯಮುನೆ ದೇವಗಂಗೆ, ತಪತಿ ಕೃಷ್ಣೆ ಭದ್ರೆ ತುಂಗೆ
ಸಲಿಲ ತೀರ್ಥ ಪುಣ್ಯರಂಗೆ, ಭರತಭೂಮಿ ನನ್ನ ತಾಯಿ

ಮತದ ಬಿರುಕುಗಳನು ತೊರೆವೆ, ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ, ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು

ಭರತಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು
ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ ಮೆಟ್ಟಿಲು


ಸಾಹಿತ್ಯ: ಕುವೆಂಪು

Tag: Bharatabhoomi nanna taayi

ಕಾಮೆಂಟ್‌ಗಳಿಲ್ಲ: