ಬುಧವಾರ, ಏಪ್ರಿಲ್ 13, 2016

ಮಾನವ ಜನ್ಮ ದೊಡ್ಡದು


ಮಾನವ ಜನ್ಮ ದೊಡ್ಡದು - ಇದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ   


ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ  ಹುಚ್ಚರಾಗುವರೆ
ಹೊನ್ನು ಮಣ್ಣಿಗಾಗಿ  ಹರಿಯ ನಾಮಾಮೃತ
ಉಣ್ಣದೆ ಉಪವಾಸ ಇರುವರೆ ಖೋಡಿ

ಕಾಲನ ದೂತರು ಕಾಲ್ಪಿಡಿದು ಎಳೆವಾಗ
ತಾಳು ತಾಳೆಂದರೆ ತಾಳುವರೆ
ಧಾಳಿ ಬಾರದ  ಮುನ್ನ ಧರ್ಮವ ಗಳಿಸಿರೊ
ಹಾಳು ಸಂಸಾರಸುಳಿಗೆ ಸಿಲುಕಬೇಡಿ   

ಏನು ಕಾರಣ ಯದುಪತಿಯನ್ನು ಮರೆತಿರಿ
ಧನಧಾನ್ಯ ಸತಿಸುತರು ಕಾಯುವರೆ
ಇನ್ನಾದರೂ ಏಕೋಭಾವದಿ ಭಜಿಸಿರೋ
ಚೆನ್ನ ಶ್ರೀ ಪುರಂದರವಿಠಲರಾಯನ


ಸಾಹಿತ್ಯ: ಪುರಂದರದಾಸರು

Tag: Manava Janma Doddaduಕಾಮೆಂಟ್‌ಗಳಿಲ್ಲ: