ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ

ವಂದೇ ಶಂಭು ಉಮಾಪತಿಂ ಸುರಗುರುಂ
ವಂದೇ ಜಗತ್ ಕಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ
ವಂದೇ ಪಶುನಾಂಪತಿಂ
ವಂದೇ ಸೂರ್ಯ ಶಶಾಂಕವಹ್ನಿ ನಯನಂ
ವಂದೇ ಮುಕುಂದಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ
ವಂದೇ ಶಿವಂ ಶಂಕರಂ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನ್ನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ

ಧರ್ಮಪಾಲ ದಯಾಶೀಲ ಮಂಜುನಾಥನೆ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ
ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ

ಅಣ್ಣಪ್ಪ ಗುರುವೆ ನಿನ್ನಗೆ ಶರಣು ಎನ್ನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲುವೆ
ನ್ಯಾಯ ಮಾರ್ಗದಲ್ಲಿ ನೆಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದಾ ಬೇಡುವೆ

ಧರ್ಮವನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು
ಸತ್ಯವೇ ಗೆಲ್ಲುವ ನ್ಯಾಯ ನೀಡು
ನಮ್ಮ ಮನದ ಗುಡಿಯಲ್ಲಿ ವಾಸ ಮಾಡು


ಗಾಯನ:  ಬಿ. ಕೆ. ಸುಮಿತ್ರ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ