ಶನಿವಾರ, ಏಪ್ರಿಲ್ 30, 2016

ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೊ

ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೊ
ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೊ
ಅಲಿಯುತ್ತ ಹತ್ತ್ ಹೆಜ್ಜೆ ಹುಲಿಯೊಂದ ಕಂಡಾನು
ಹುಲಿರಾಯ ಕಾಡಲ್ಲಿ ಧೀರಾಗಿ ನಡೆಯುತ್ತ
 ಹುಲಿರಾಯ ಕಾಡಲ್ಲಿ ಧೀರಾಗಿ ನಡೆಯುತ್ತ
ಎದುರೀಲಿ ಹೈದನ ಜಗ್ಗಂತ ನೋಡ್ಯಾನು
ಜಗ್ಗಂತ ನೋಡುತ ನಿಂತಲ್ಲೆ ನಿಂತಾನು
ಜಗ್ಗಂತ ನೋಡುತ ನಿಂತಲ್ಲೆ ನಿಂತಾನು
ನಿಂತಲ್ಲೆ ನಿಂತೋನು ಬಾಲಾನ ಮಿಸುಕ್ಯಾನು
ನಿಂತಲ್ಲೆ ನಿಂತೋನು ಬಾಲಾನ ಮಿಸುಕ್ಯಾನು 

ಬಿಡು ಬಟ್ಟೆ ಬಿಡು ಬಟ್ಟೆ ಅನ್ನುತ ಇದೆ ಕಣ್ಣು
ಬಿಡು ಬಟ್ಟೆ ಬಿಡು ಬಟ್ಟೆ ಅನ್ನುತ ಇದೆ ಕಣ್ಣು
ಬಿಡನಲ್ಲ ಬಿಡನಲ್ಲ ಅನ್ನುತ ಇದೆ ಜೀವ
ನೆಟ್ಟನ ನೋಟಾನಾ ಹಿಂದಕ್ಕೆ ಸೆಳೆದಾನು
ನೆಟ್ಟನ ನೋಟಾನಾ ಹಿಂದಕ್ಕೆ ಸೆಳೆದಾನು
ಹತ್ತೆಜ್ಜೆ ಒಡಲಾನಾ ಒಂದೆಜ್ಜೆ ಮಾಡ್ಯಾನು
ಹತ್ತೆಜ್ಜೆ ಒಡಲಾನಾ ಒಂದೆಜ್ಜೆ ಮಾಡ್ಯಾನು

ಒಂದ್ ಹೆಜ್ಜೆ ಒಡಲಾಗಿ ಚಿಮ್ಮಂತ ಜಿಗಿದಾನೊ
ಒಂದ್ ಹೆಜ್ಜೆ ಒಡಲಾಗಿ ಚಿಮ್ಮಂತ ಜಿಗಿದಾನೊ
ಚಿಮ್ಮಂತ ಜಿಗಿದೋನು ಅಡಿಯಾಗಿ ಕೆಡೆದಾನೊ
ಕಾಡಿನದು ಈ ಬಟ್ಟೆ ಹೈದನದು ಅಂದಾನೊ
ಕಾಡಿನದು ಈ ಬಟ್ಟೆ ಹೈದನದು ಅಂದಾನೊ
ಅನ್ನುತ ಕಾಡಾಗಿ ಗುಡುಗಿಟ್ಟು ಮೊಳಗ್ಯಾನೊ
ಅನ್ನುತ ಕಾಡಾಗಿ ಗುಡುಗಿಟ್ಟು ಮೊಳಗ್ಯಾನೊ
ಹೇ.........ಯ್ಯಾ

ಸಾಹಿತ್ಯ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಗಾಯನ ಮತ್ತು  ಸಂಗೀತ: ಸಿ. ಅಶ್ವಥ್


ಕಾಮೆಂಟ್‌ಗಳಿಲ್ಲ: