ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಗ್ತೀರ ನನ್ ಹಿಂದೆ?


ನಗ್ತೀರ ನನ್ ಹಿಂದೆ? ನಗ್ರಯ್ಯಾ ನಗ್ರಿ;
ಸುಮ್ನೆ ಸಿಕ್ಲಿಲ್ಲ ಹೆಸ್ರ್ ಹಿಂದಿನ್ ಡಿಗ್ರಿ.
ಮೂರು ವರ್ಷ ಪ್ರೋಫೆಸರ್ರ ನಾಯಿಗೆ ಸ್ನಾನ
ಹಿರೀ ಮಗನ್ ಚೌಲಕ್ಕೆ ಮಖ್ಮಲ್ ಜಮ್ಖಾನ
ಇನ್ನವರ ಮೈದುನನ್ಗೆ ಸಿನಿಮಾ ಗಾನ
ಪ್ರತಿ ದಿನ ಒಪ್ಸಿದೀನಿ ಅಮ್ಮಾವ್ರಿಗೆ ಪೌಡ್ರು, ಸ್ನೋನ.
ನಗ್ತೀರ ನನ್ ಹಿಂದೆ? ನಗ್ರಯ್ಯಾ ನಗ್ರಿ;
ಸುಮ್ನೆ ಸಿಕ್ಲಿಲ್ಲ ಹೆಸ್ರ್ ಹಿಂದಿನ್ ಡಿಗ್ರಿ.

ಸುಮ್ ಸುಮ್ನೆ ಕಾರ್ತಿತ್ತೆ ಪ್ರೊ||ಕಣ್ ಕೆಂಡ?
ಅಷ್ಟೂ ತಿಳೀದಿದ್ರೆ ಹುಟ್ಟಿದ್ದೂ ದಂಡ!
ಆ ರಾತ್ರಿ ಮರೆವೋ ಏನಾಯ್ತೋ ಮಣ್ಣು
ಇಲ್ದಿದ್ರೆ ತಪ್ಪಿಸ್ತಿದ್ನೆ ಪಚ್ ಬಾಳೆಹಣ್ಣು?
ಶುಂಠಿಅಂತ್ ಬೈದಾಗ ಅವ್ರ್ ಹೆಣ್ತಿ ನನ್ನ,
ಆಂಟಿಅಂತ್ ಕೈ ಜೋಡ್ಸಿ, ಆ ಕರಿ ಹೆಣ್ನ
ಡ್ರೈವ್ ಮಾಡಿ ಸುತ್ಸಿದ್ದು ಸುಮ್ನೇನ ಮತ್ತೆ?
ಕೊಳೆ ಬಟ್ಟೆ ಹೊತ್ತಂಗೆ ಧೋಬಿಯ ಕತ್ತೆ!
ನಗ್ತೀರ ನನ್ ಹಿಂದೆ? ನಗ್ರಯ್ಯಾ ನಗ್ರಿ;
ಸುಮ್ನೆ ಸಿಕ್ಲಿಲ್ಲ ಹೆಸ್ರ್ ಹಿಂದಿನ್ ಡಿಗ್ರಿ.

ಪದವಿ ಪಡೆದ್ ಮೇಲು ಪಟ್ಟೀದಿನಿ ಕಷ್ಟ
ಇಲ್ದಿದ್ರೆ ಆಗ್ತಿದ್ನೆ ಬೀದಿ ಅಲೆಯೊ ಭ್ರಷ್ಟ.
ಹಿಡ್ದಿದೀನಿ ಎಂ.ಎಲ್.ಎ ರಾಮಪ್ನ ಕಾಲ್ನ
ಕುಡ್ಸಿದೀನಿ ಕೊಡಗಟ್ಲೆ ಖೋಡೇಸ್ ಹಾಲ್ನ
ಪ್ಯೂನಿಗು ಕೊಡ್ಸಿದೀನಿ ಒಂದ್ಜೋತೆ ಬಾಟ
ಕ್ಲಾರ್ಕಿಗೆ ಬಿರಿಯಾನಿ, ತಂದೂರ್ ಪರೋಟ;
ಟೈಪಿಸ್ಟೋ ಟ್ಯಾಕ್ಸಿಯಲಿ ಮಾಡಿದ್ದೆ ಜಲ್ಸ
ಆಫೀಸರ್ಗೆ ಕೊಡ್ಸಿದ್ದು ಹೇಳ್ಬಾರ್ದು ಹೊಲ್ಸ್ನ
ಕೂತಲ್ಲೆ ಹುಡುಕ್ಕೊಂಡು ಬರ್ಲಿಲ್ಲ ಕೆಲ್ಸ
ಗಿಟ್ಸಿದ್ದು ಹತ್ಸಲ ಮೇಲಕ್ಕೆ ಹೆಗ್ರಿ;
ಇದನ್ ತಿಳೀದೆ ನಗ್ತೀರ? ನಗ್ರಯ್ಯಾ ನಗ್ರಿ.

ಗುರು ಕಲ್ಸಿದ್ ಹೇಳ್ತೀನಿ ನನ್ಗ್ಯಾಕೆ ಸಿಗ್ಗು?
ಕೆಲ್ಸಕ್ಕಿಂತ  ಮುಖ್ಯ ಪಾಲಿಟಿಕ್ಸೊ ಗುಗ್ಗು!
ಜೋತೆಯೋರ್ ಕೂಡ ನಡೆಸ್ಬೇಕು ದಿವ್ಸಾ ಸ್ಪರ್ಧೆ;
ಬುದ್ಧಿ, ಜ್ಞಾನ ಅವೆಲ್ಲಿ ನಿನ್ಗೆಎಳೀ ಅವಕ್ಕೆ ಪರ್ದೆ.
ನೀಟಾಗಿ ಡ್ರಸ್ ಮಾಡಿ ಮುಚ್ಕೋ ಹಳ್ಳ ತಿಟ್ಟು,
ನಾಚ್ಕಿ ಬಿಟ್ಟು ಅರ್ಪಿಸಿಬಿಡು ಅಧಿಕಾರಿಗೆ ಜುಟ್ಟು.
ಆಗ್ದೊರ ಮೇಲೆ ಪಿಸು ನುಡಿಯಲ್ಲೆ ಕೆಟ್ಕೆಟ್ ಕತೆ ಕಟ್ಟು;
ಇದೇ ಕಣೋ ಬಕ್ರ ನಾ ಮೇಲ್ಬಂದ್ ಗುಟ್ಟು!
-ಅಂಥ ಗುರು ಕರುಣಿಸಿದ್ದು ಈ ನನ್ನ ಡಿಗ್ರಿ;
ನಗ್ರೀರ ನನ್ ಹಿಂದೆ? ನಗ್ರಯ್ಯಾ ನಗ್ರಿ

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್

Tag: nagteera nan hinde, nagteera nanna hinde

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ