ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರಿ ಸರ್ವೋತ್ತಮ


ಹರಿಸರ್ವೋತ್ತಮ ವಾಯುಜೀವೋತ್ತಮ
ಗುರು ರಾಘವೇಂದ್ರರೆಂದರಿ  ಮನವೇ
ನಿರುತ ನೀ ಗುರು ಪದ ಭಜನೆಯ ಮಾಡೆ
ದುರಿತಗಳೆಲ್ಲವು ಓಡಿ ಪೋಗುವುವು 

ಜಲಜಮಣಿ ಕಮಂಡಲ ದಂಡದಿಂದೊಪ್ಪುವ
ಕಮಲೇಶ ಪ್ರಿಯ ರಾಘವೇಂದ್ರರು
ಕಲಿಯುಗದಲಿ ಕಾಮಧೇನು ಸುರ ತರುವಂತೆ
ಎಲ್ಲರಿಷ್ಟವನೀವ ಗುರುವೆಂದರಿವರಯ್ಯಾ

ಹರಿ ಸರ್ವೋತ್ತಮ ವಾಯು ಜೀವೋತ್ತಮ
ಗುರು ರಾಘವೇಂದ್ರರೆಂದರಿ  ಮನವೇ

ಸಾಹಿತ್ಯ: ಕಮಲೇಶ ವಿಠಲರು


Tag: Hari Sarvottama

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ