ಬೆಳಕಿನ ಹುಳ
ಬ್ರಹ್ಮಾಂಡದೊಡಲಲ್ಲಿ
ಹುಳವೊಂದು ಕುಂತಿತ್ತು
ಹುಳದ
ಒಡಲೊಳಗೆ ಬೆಂಕಿ ಹತ್ತಿ ಉರಿಯುತ್ತಿತ್ತು
ಆ
ಬೆಳಕು ಜಗವನ್ನು ಕಟ್ಟಿ ಆಳಲು ಬಂತು
ಭೂಮಿಯ
ತುಂಬೆಲ್ಲ ಜೀವರಾಶಿಯನು ತಂತು
ಲೋಕದಾಟದ
ಜೊತೆಗೆ ಜೀವದಾಟವು ಸೇರಿ
ಕಾಲದಾಟಕೆ
ಮೋಡಿ ಮಾಡಿ ನಲಿಯಿತಲ್ಲಾ
ಲೋಕ
ಜೀವದ ಒಳಗೆ ನಾಕ ಬೆಳಕದು ತುಂಬಿ
ಸಿರಿ
ಬೆಳಕ ಮಾಯದಲಿ ಒಗತನ ಸಾಗಿತ್ತಲ್ಲ
ಬೆಳಕಿನಾ
ಹುಳವನ್ನು ಕಂಡವರು ಯಾರಿಲ್ಲ
ಹೊಳವಿನಾ
ಮಾಯೆಯನು ಅರಿತವರು ಯಾರಿಲ್ಲ
ಮೂಲಚೂಲವರಿಯದೆ
ಬದುಕದು ಬೆಳೆಯಿತಲ್ಲ
ಆದಿಯರಿಯದ
ಜೀವ ಅಂತ್ಯವನು ಅರಿತಿಲ್ಲ.
ಹುಳದೊಳಗೆ
ಹುಳಹುಟ್ಟಿ ಲೋಕಮುಟ್ಟಿಯ ಮೆಟ್ಟಿ
ಜೀವಚಕ್ರಕೆ
ಕೊನೆಯು ತಾ ಕಂಡು ಬರಲಿಲ್ಲ
ಬಂದಿದ್ದು
ಉಳಿಯದೆಯೆ ಅಳಿದಿದ್ದು ಮರೆಯದೆಯೆ
ಯಾರೊ
ಕಟ್ಟಿದ ಲೋಕ ಯಾರೊ ಆಳುವರಲ್ಲ.
ಹುಟ್ಟು
ವರವು ಬಂದಂದೆ ಸಾವು ವರವು ಬಂತು
ದೇಹ
ಕೊಟ್ಟವನು ಬಿಡದೆ ದೇಹ ಕಿತ್ತುಕೊಂಡ
ಜೀವ
ಕೊಟ್ಟವನು ಮತ್ತೆ ಜೀವ ಎತ್ತುಕೊಂಡ
ಗೊಂಬೆಗಳ
ಆಟವನು ನೋಡುವರು ನಿಂತವರು
ಬೆಳಕಿನಾ
ಹುಳವನ್ನು ಕಾಣಬೇಕೋ ಅಣ್ಣ
ಬೆಳಕಿನಾ
ಲೋಕವನು ಆಳಬೇಕೋ ಚಿನ್ನ
ಬೆಳಕಿನಾ
ಕೂಟವನು ಸೇರಬೇಕೋ ರನ್ನ
ಬೆಳಕಿನಾ
ಜೊತೆಗೂಡಿ ಬಾಳಬೇಕೋ ಘನ್ನ
ಸಾಹಿತ್ಯ: ಪ್ರೊ. ಡಿ. ಲಿಂಗಯ್ಯ
Tag: Brahmandadodalalli Huluvondu kuntittu
ಕಾಮೆಂಟ್‌ಗಳು