ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮನ ಅವತಾರ


ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಜಾರತನ ಸದೆ ಬಡಿವ ಸಂಭ್ರಮದ ನೆಪವೋ
ರಾಮನ ಅವತಾರ ರಘುಕುಲ ಸೋಮನ ಅವತಾರ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮ ಸಂಯಮ ಜೀವನಸಾರ ಹರಿವುದು ಭೂಮಿಯ ಭಾರ
ರಾಮನ ಅವತಾರ

ದಾಶರಥಿಯ ದಿವ್ಯಾತ್ಮವ ತಳೆವ ಕೌಸಲ್ಯೆಯ ಬಸಿರೆನಿತು ಪುನೀತ
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತ್ರುಘ್ನ ಭರತ
ರಾಮನ ಅವತಾರ ರಘುಕುಲ ಸೋಮನ ಅವತಾರ

ತ್ರಿಭುವನಪಾಲಗೆ ನೆಪಮಾತ್ರ ವರಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹರಿಸುವ ಗಾತ್ರ
ರಾಮನ ಅವತಾರ ರಘುಕುಲ ಸೋಮನ ಅವತಾರ

ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಕಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ
ರಾಮನ ಅವತಾರ ರಘುಕುಲ ಸೋಮನ ಅವತಾರ

ಕಪಟನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನವಾಸದ ಕುಹಕ
ಲೋಕೋದ್ಧಾರದ ಮೊದಲಂಕ

ಭರತಗೆ ಪಾದುಕೆ ನೀಡುವ ವೇಷ
ಗುರುಜನ ಭಕ್ತಿಯ ಆದೇಶ
ನರಲೋಕಕೆ ನವನಿಧಿ ಸಂತೋಷ
ಭರವಸೆ ನೀಡುವ ಸಂದೇಶ
ರಾಮನ ಅವತಾರ ರಘುಕುಲ ಸೋಮನ ಅವತಾರ

ಆಹಾ..! ನೋಡದೋ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ
ಹೆಣ್ಣಿದು ಶಿವನುರಿಗಣ್ಣೋ ಮಂಕೆ
ಮಣ್ಣಾಗುವೆ ನೀ ನಿಶ್ಯoಕೆ

ಶರಣು ಶರಣು ಹೇ ಭಾಗವತ್ತೋತ್ತಮ
ಕನ್ನಡ ಕುಲಪುoಗವ ಹನುಮ
ಮುದ್ರಿಕೆಯಲ್ಲಿದು ಸೋಹಮ್ ಬ್ರಹ್ಮ
ಎಂಬುವ ತತ್ವವ ತಿಳಿಸಮ್ಮ

ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ

ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀಕಥೆ ಅಮರ
ಮೆರೆಯಲಿ ಈ ಶುಭ ಸತ್ವ ವಿಚಾರ
ಪರಸತಿ ಬಯಕೆಯ ಸಂಹಾರ
ರಾಮನ ಅವತಾರ ರಘುಕುಲ ಸೋಮನ ಅವತಾರ

ಚಿತ್ರ: ಭೂಕೈಲಾಸ
ಸಾಹಿತ್ಯ : ಕು.ರಾ.ಸೀತಾರಾಮಶಾಸ್ತ್ರಿ
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್
ಗಾಯನ : ಶ್ರೀರ್ಗಾಳಿ ಗೋವಿಂದರಾಜನ್


Tag: Ramana Avatara, Raamana Avataara, Raghukula somana avataara

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ