ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೀನ ನಾ ಬಂದಿರುವೆ

ದೀನ ನಾ ಬಂದಿರುವೆ
ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ
ದಯೆ ತೋರಿ ಗುರುವೇ

ಕೃಷ್ಣನಾಲಯದಾಚೆ ನಿಂತ
ಕನಕನ ರೀತಿ
ಕಾದಿರುವೆ ಕಾತುರದೆ
ಎನ್ನ ಮೊರೆ ಕೇಳಿಸದೆ ಗುರುವೆ

ದ್ರೋಣರಾ ಬಳಿ ಬಂದ
ಏಕಲವ್ಯನ ತೆರದೆ
ಗುರು ನಿಮ್ಮ ಕೃಪೆ ಬಯಸಿ
ನಾ ಬಂದೆ ತಂದೆ

ನಿಮ್ಮ ಪಾದದ ಬಳಿಯೆ ಎನಗೆ
ಆಶ್ರಯ ನೀಡಿ
ಸಂಗೀತ ಸುಧೆಯ ಹರಿಸಿ ಸಲಹಿ
ಎನ್ನನು ಗುರುವೆ ಗುರುವೆ ಗುರುವೆ

ಚಿತ್ರ: ಸಂಧ್ಯಾರಾಗ
ರಚನೆ:  ಆರ್. ಎನ್. ಜಯಗೋಪಾಲ್
ಸಂಗೀತ: ಜಿ. ಕೆ ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್
















Tag: deena na banidruve, dheena naa bandiruve



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ