ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅ ಆ ಇ ಈ ಕನ್ನಡದ ಅಕ್ಷರಮಾಲೆ

ಅ ಆ..ಅ ಆ.. ಇ ಈ..ಇ ಈ..
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ

ಆ ಆ ಆಟ ಊಟ ಓಟ ಕನ್ನಡ ಒಂದನೆ ಪಾಠ
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ

ಇ ಇ ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು
ಈ ಈ ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು
ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು
ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ

ಉ ಉ ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
ಊ ಊ ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ
ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ
ಋ ೠ ಎ ಏ ಐ.. ಭಾರತ ಮಾತೆಗೆ ಜೈ!

ಒ ಒ ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು
ಓ ಓ ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ

ಔ ಅಂ ಅಃ..ಔ ಅಂ ಅಃ.. ಅಃ.. ಆಹಾ.. ಆಹ ಹ ಹ ಹ

ಚಿತ್ರ: ಕರುಳಿನ ಕರೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಬಿ. ಕೆ. ಸುಮಿತ್ರ ಮತ್ತು ಸಂಗಡಿಗರು



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ