ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಾವ ಹೂವು ಯಾರ ಮುಡಿಗೋ

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದೆ
ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಮುಖದಿ ಒಂದು ಭಾವನೆ
ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ
ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು
ಯಾರ ಪಾಲು ಯಾರಿಗೋ
ಯಾರಿಗೋ

ಒಂದು ಸುಮವು ಅರಳಿತು
ದುಂಭಿಯನ್ನು ಒಲಿಸಿತು
ಮೋಹಪಾಶ ಎಸೆಯಿತೂ
ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು
ಗುರುವು ಯಾರು ಯಾರಿಗೋ
ಯಾರಿಗೋ

ಎಂದೋ ಹುಟ್ಟಿದಾಸೆಯು
ಇಂದು ಮನವ ತಟ್ಟಿತು
ಮನದ ಕದವ ತೆರೆಯಲು
ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು
ಯಾರ ಪಯಣ ಎಲ್ಲಿಗೋ
ಎಲ್ಲಿಗೋ

ಚಿತ್ರ: ಬೆಸುಗೆ
ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ

Tag: Yava hoovu yaara mudigo



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ