ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಓ ನಲ್ಲನೆ ಸವಿ ಮಾತೊಂದ ನುಡಿವೆಯಾ

ಓ ನಲ್ಲನೆ ಸವಿ ಮಾತೊಂದ ನುಡಿವೆಯಾ
ನಾನೇನನು ನುಡಿಯಲೆ ನಲ್ಲೆ ತಿಳಿಸೆಯಾ
ನಾ ನಿನ್ನ ಬಿಡೆನು ಎಂದಿಗೂ
ನೀ ನನ್ನ ಜೀವ ಎಂದಿಗೂ

ಅರಗಣಿ ಸವಿ ಮಾತೊಂದ ನುಡಿವೆಯಾ
ನಾನೇನನು ನುಡಿಯಲೆ ನಲ್ಲೆ ತಿಳಿಸೆಯಾ
ನಾ ನಿನ್ನ ಬಿಡೆನು ಎಂದಿಗೂ
ನೀ ನನ್ನ ಜೀವ ಎಂದಿಗೂ

ಹಾಲು ಜೇನು ಕಲೆತಂತೆ
ಮನಸು ಮನಸು ಕಲೆತಾಯ್ತು
ಬದುಕಲ್ಲಿ ಹರುಷ ತುಂಬಿತು
ನದಿಗಳೆರಡು ಬೆರೆತಂತೆ
ಹೃದಯವೆರಡು ಬೆರೆತಾಯ್ತು
ನೀ ಬಂದು ಬಾಳು ಬೆಳಗಿತು
ನಾವೆಂದೆಂದೂ ಹೀಗೊಂದಾಗಿ
ಇರುವಾಸೆ ತಂದಿತು 
ಓ ನಲ್ಲನೆ ಸವಿ ಮಾತೊಂದ ನುಡಿವೆಯಾ
ನಾನೇನಲು ನುಡಿಯಲೆ ನಲ್ಲೆ ತಿಳಿಸೆಯಾ
ನಾ ನಿನ್ನ ಬಿಡೆನು ಎಂದಿಗೂ
ನೀ ನನ್ನ ಜೀವ ಎಂದಿಗೂ

ಪ್ರೇಮ ಜ್ಯೋತಿ ಬೆಳಗುತಿದೆ
ಇರುಳ ನುಂಗಿ ಬೆಳೆಯುತಿದೆ
ಬಾಳಿಗೆ ತಂದು ಹರುಷವ
ಆರದಂತೆ ಜ್ಯೋತಿಯನು
ಕಾವಲಿರಿಸಿ ಕಂಗಳನು
ಬಾಳನ್ನೇ ಧಾರೆ ಎರೆಯುವಾ
ನಾವೆಂದೆಂದೂ ಹೀಗೊಂದಾಗಿ
ಆನಂದ ಹೊಂದುವಾ
ಓ ಅರಗಣಿ ಸವಿ ಮಾತೊಂದ ನುಡಿವೆಯಾ
ನಾ ನಿನ್ನ ಬಿಡೆನೂ ಎಂದಿಗೂ

ರಚನೆ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯನ: ಎಸ್ ಪಿ ಬಾಲಸುಬ್ರಮಣ್ಯಮ್ ಮತ್ತು ಪಿ ಸುಶೀಲ.


Tag: o nallane savi matonda nudiveya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ