ತಾಯೆ ಬಂದು ನೆಲೆಸು
ತಾಯೆ
ಬಂದು ನೆಲೆಸೌ
ಇಂದಿರೆ
ಎನ್ನೆಯ ಮಂದಿರದೊಳಗಾನಂದದಿ
ಹಲವು
ಕಾಲದಿ ಕಾಣದೆ ನಿಮ್ಮನ್ನು
ಬಳಲುತನಿರ್ಪೆನು
ದೇವಿಯೆ
ನಳಿನಾನೇತ್ರೆ
ಕರುಣಾದಿಂದಲಿ
ಒಲಿದು
ಬಂದಿರಿ ದೇವಿಯೆ
ಮುತ್ತು
ಮಾಣಿಕ್ಯದ ಮಂಟಪದಲ್ಲಿ
ರತ್ನದ
ಪೀಠವನಿರಿಸುವೆನು
ವಿಷ್ಣು
ಸಹಿತಲೆ ಲಕ್ಷ್ಮೀ ನಿಮ್ಮನು
ಅರ್ಥಿಯಿಮ್
ಧ್ಯಾನಿಸಿ ಪೂಜಿಪೆ
ವರಮಣಿ
ಖಚಿತದ ನೆರೆಗಿಂಡಿಯೊಳು
ಸುರನದಿ
ಗಂಗೆಯ ತುಂಬುತಲಿ
ಸಿರಿವರನರಸಿಯ
ಚರಣವ ತೊಳೆದು
ವರವಸ್ತ್ರಗಳಿಂದೊರೆಸುವೆನು
ಅಂಗಜ
ಮಾತೆಗೆ ಅಭಿಷೇಕವನು
ಸಂಭ್ರಮದಿಂದಲಿ
ಮಾಡುವೆನು
ಅಂದವಾದ
ಪೀತಾಂಬರವನು
ಸುಂದರನಡುವಿನೊಳುಡಿಸುವೆನು
ಸಿರಿಮುಡಿಯೆಳೆಸುತ
ಹೆರಳನು ಹಾಕುತ
ಪರಿಪರಿ
ಕುಸುಮವ ಮುಡಿಸುವೆನು
ಸರಸೀಜಾಕ್ಷಿಗೆ
ಸರ್ವಾಭರಣವ
ಪರಮಾದರದಿ
ಹಾಕುವೆ
ಅರಶಿನ
ಕುಂಕುಮ ಅಕ್ಷತೆ ಗಂಧ
ಪರಿಪರಿ
ಕುಸುಮದ ಮಾಲೆಗಳ
ಸಿರಿವರನರಸಿಯ
ಕೊರಳಿಗೆ ಹಾರವ
ಪರಮಾದರದಿ
ಹಾಕುವೆ
ಪರಿಪರಿ
ಪುಷ್ಪದಿಂದೊಡಗೂಡುತಲಿ
ವರಧೂಪಾದಿ
ದೀಪಗಳ
ಬಗೆಬಗೆ
ಭಕ್ಷ ಪಾಯಸದಿಂದಲೆ
ಮಿಗಿಲಾರೊಗಣೆ
ಮಾಡುವೆ
ಮಂಗಳವಾದ್ಯದಿಂದೊಡಗೂಡುತಲಿ
ಅಂಗನೆಯರೆಲ್ಲರು
ಹರುಷದಲಿ
ಮಂಗಳಾರತಿ
ಎತ್ತಿ ಚಂದದಿ
ವಂದಿಸಿ
ನಾನು ಬೇಡುವೆ
ರಕ್ಷಿಸು
ರಕ್ಷಿಸು ತಾಯೆ ನಮ್ಮನು
ಪ್ರದಕ್ಷಿಣೆಗಳ
ನಾ ಮಾಡುವೆನು
ರಕ್ಷಿಸೆಮ್ಮನು
ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಬೇಡುವೆ
Tag: Thaye bandu nelesu, Taye bandoo nelesu
ee haaDina lyrics nanna snEhite kELiddaru. illirabahudu amta huDukide. kaDegoo sikkitu. huDukuvikeyannu uttama paDisalu saadhyave ?
ಪ್ರತ್ಯುತ್ತರಅಳಿಸಿಸದ್ಯಕ್ಕೆ ಈಗಿರುವ ಹುಡುಕುವಿಕೆಯ ರೀತಿಯಲ್ಲಿ ಕನ್ನಡದಲ್ಲಿ 'ತಾಯೆ ಬಂದು ನೆಲೆಸೌ' ಅಥವಾ ಇಂಗ್ಲಿಷಿನಲ್ಲಿ Thaye bandu nelesu' ಎಂದು ಟೈಪ್ ಮಾಡಿದರೆ ಬರುವ ವ್ಯವಸ್ಥೆ ಇದೆ. ತಾವು ಹೇಳಿದ ಹಾಗೆ ಮತ್ತಷ್ಟು ಉತ್ತಮಗೊಳಿಸುವ ಆಶಯ ಇದೆ. ಖಂಡಿತ ಪ್ರಯತ್ನಿಸುತ್ತೇನೆ. ಧನ್ಯವಾದಗಳು. ನಮಸ್ಕಾರ
ಪ್ರತ್ಯುತ್ತರಅಳಿಸಿNaanu baraha reetiyalli "taaye baMdu nelesou" eMdu 2-3 reetiyalli prayatniside. sigalilla. But thanks for your reply and for posting the lyrics of so many wonderful songs!
ಪ್ರತ್ಯುತ್ತರಅಳಿಸಿBandu nelasou Mahalskshmi devige..antha namma thaayi haadutthidaru.kelavu saalugalu marethittu.Eee haadannu nodi thumba thumba santhoshavaayithu! YOU MADE MY DAY!
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿCorrection. Read so nice to listen to.
ಪ್ರತ್ಯುತ್ತರಅಳಿಸಿHaadina Pallavi yalli
ಪ್ರತ್ಯುತ್ತರಅಳಿಸಿAndavada paada padmake vandisi beduvenoo taaye
Ee salu Namma version Nalli iratte
Thanks for posting the song
in my version, after first saalu, ಚೆಂದವಾದ ಪಾದಪದ್ಮಕೆ ಆನಂದದಿ ಪೂಜೆಯ ಮಾಡುವೆನು yendu ide
ಪ್ರತ್ಯುತ್ತರಅಳಿಸಿMay God bless you! This song is so captivating, I keep singing it involuntarily!
My 93 year old mother sings this song daily. She was asking me to write it down. I did but after that I searched for it and found it. Very happy to find it. Thank you for posting it.
ಪ್ರತ್ಯುತ್ತರಅಳಿಸಿ