ಕವಿಯ ಮನಸು
ಕವಿಯ ಮನಸು
-ಜಿ. ಎಸ್. ಶಿವರುದ್ರಪ್ಪ
ಪ್ರಕೃತಿಯಂತೆ ಕವಿಯ ಮನಸು
ವಿಪುಲ ರೂಪ ಧಾರಿಣಿ.
ಬ್ರಹ್ಮನೆದೆಯ ಕನಸಿನಂತೆ
ಕೋಟಿ ಕಲ್ಪ ಗಾಮಿನಿ.
ಕಡಲಿನಂತೆ ಕವಿಯ ಮನಸು
ರತ್ನಗರ್ಭ ರಾಗಿಣಿ.
ಯುಗ ಯುಗಗಳ ನಶ್ವರಕ್ಕೆ
ಅಮೃತ ಕವಚದಾಯಿನಿ.
ಬಾನಿನಂತೆ ಕವಿಯ ಮನಸು
ಭಾವಮೇಘ ಚಾರಿಣಿ.
ಬೆಂದ ಬುವಿಯ ಹಸುರಿನೆದೆಗೆ
ರುಚಿತ ವರ್ಷ ರೂಪಿಣಿ.
ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ
Photo Courtesy: http://peaceroad.wordpress.com/tag/fall-season/
Tag: kaviya manasu
Tag: kaviya manasu
ಅದು ಬೊಮ್ಮನೆದೆಯ ಅಂತ ಕೇಳಿದ ನೆನಪು. ಇದು ಹಾಡುವುದಕ್ಕೂ ಸುಲಲಿತವಾಗಿರುತ್ತೆ
ಪ್ರತ್ಯುತ್ತರಅಳಿಸಿ