ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಮನೆಲ್ಲಿ ಕಾಣೆನೆಂದು ಹೇಳಬೇಡ


ಯಮನೆಲ್ಲಿ ಕಾಣೆನೆಂದು ಹೇಳಬೇಡ
ಯಮನೇ ಶ್ರೀ ರಾಮನು ಸಂದೇಹ ಬೇಡ
ನಂಬಿದ ವಿಭೀಷಣಗೆ ರಾಮನಾದ
ನಂಬದಿದ್ದ ರಾವಣಗೆ ಯಮನಾದ

ನಂಬಿದ ಅರ್ಜುನನಿಗೆ ಬಂಟನಾದ
ನಂಬದಿದ್ದ ಕೌರವನಿಗೆ ಕಂಟಕನಾದ
ನಂಬಿದ ಉಗ್ರಸೇನನಿಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ

ನಂಬಿದ ಪ್ರಹ್ಲಾದನಿಗೆ ಹರಿಯಾದ
ನಂಬದಿದ್ದ ಹಿರಣ್ಯಕಗೆ ಅರಿಯಾದ
ನಂಬಿದವರ ಸಲಹುವ ನಮ್ಮ ದೊರೆಯು
ಅಂಬುಜಾಕ್ಷ ಪುರಂದರ ವಿಠ್ಠಲರಾಯ

ಸಾಹಿತ್ಯ: ಪುರಂದರದಾಸರು


Tag: Yamanelli kaanendu kelabeda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ