ಕೃಷ್ಣಾ ಎನಬಾರದೆ?
ಕೃಷ್ಣಾ ಎನಬಾರದೆ?
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣಾ ಎನಬಾರದೆ?
ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣಾ ಎನಬಾರದೆ?
ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣಾ ಎನಬಾರದೆ?
ಕೃಷ್ಣಾ ಎಂದರೆ ಕಷ್ಟವು ಪರಿಹಾರ
ಕೃಷ್ಣಾ
ಎನಬಾರದೆ?
ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಶ್ರೀ
ಕೃಷ್ಣಾ ಎನಬಾರದೆ?
ಸುಳಿದಾಡುವ ಮನೆಯೊಳಗಾದರು ಒಮ್ಮೆ
ಕೃಷ್ಣಾ
ಎನಬಾರದೆ?
ಸ್ನಾನ ಪಾನ ಜಪ ತಪಗಳ ಮಾಡುತ
ಕೃಷ್ಣಾ ಎನಬಾರದೆ?
ಶಾಲ್ಯಾನ್ನ ಷಡುರಸ ತಿಂದು
ತೃಪ್ತನಾಗಿ ಕೃಷ್ಣಾ ಎನಬಾರದೆ?
ಗಂಧವ ಪೂಸಿ ತಾಂಬೂಲವ ಮೆಲುವಾಗ
ಕೃಷ್ಣಾ ಎನಬಾರದೆ?
ಚೆಂದುಳ್ಳ ಹಾಸಿಗೆಯೊಳು ಕುಳಿತೊಮ್ಮೆ ಶ್ರೀ
ಕೃಷ್ಣಾ ಎನಬಾರದೆ?
ಕಂದನ್ನ ಬಿಗಿದಪ್ಪಿ ಮುದ್ದಾಡುತ
ಕೃಷ್ಣಾ ಎನಬಾರದೆ?
ಮಂದಗಾಮಿನಿಯೊಳು ಸರಸವಾಡುತಲೊಮ್ಮೆ
ಕೃಷ್ಣಾ ಎನಬಾರದೆ?
ಮೇರೆ ತಪ್ಪಿ ಮಾತನಾಡುತಲೊಮ್ಮೆ
ಕೃಷ್ಣಾ ಎನಬಾರದೆ?
ದಾರಿಯ ನಡೆವಾಗ ಭಾರವಹೊರುವಾಗ
ಕೃಷ್ಣಾ ಎನಬಾರದೆ?
ಪರಿಹಾಸ್ಯದ ಮಾತನಾಡುತಲೊಮ್ಮೆ ಶ್ರೀ
ಕೃಷ್ಣಾ ಎನಬಾರದೆ?
ಪರಿ ಪರಿ ಕೆಲಸದೊಳೊಂದು ಕೆಲಸವೆಂದು
ಕೃಷ್ಣಾ ಎನಬಾರದೆ?
ದುರಿತ ರಾಸಿಗಳನು ತರಿದು ಬಿಸಾಡುವ
ಕೃಷ್ಣಾ ಎನಬಾರದೆ?
ಗರುಡ ಗಮನ ನಮ್ಮ
ಪುರಂದರ ವಿಠಲನ ಕೃಷ್ಣಾ ಎನಬಾರದೆ?
ಸಾಹಿತ್ಯ:
ಪುರಂದರದಾಸರು
ಗಾಯನ: ಡಾ. ಎಂ. ಬಾಲಮುರಳಿಕೃಷ್ಣ
Tag: Krishna Enabarade
ಕಾಮೆಂಟ್‌ಗಳು