ಅಂತಃಪುರ ಗೀತೆಗಳು
ಏನೀ ಮಹಾನಂದವೇ - ಓ ಭಾಮಿನೀ|
ಏನೀ ಸಂಭ್ರಮದಂದವೇ - ಬಲ್ಚಂದವೇ ||
ಏನೀ ನೃತ್ತಾಮೋದ - ಏನೀ ಮೌರಜ ನಾದ|
ಏನೀ ಜೀವೋನ್ಮಾದ - ವೇನೀ ವಿನೋದ ||
ಢಕ್ಕೆಯ ಶಿರಕೆತ್ತಿ – ತಾಳಗೋಲಿಂ ತಟ್ಟಿ|
ತಕ್ಕಿಟ ಧಿಮಿಕಿಟ – ತಕಝಣುರೆನಿಸಿ ||
ಕುಕ್ಕುತೆ ಚರಣವ – ಕುಲುಕುತೆ ಕಾಯವ|
ಸೊಕ್ಕಿದ ಕುಣಿತವ – ಕುಣಿವೆ ನೀನೆಲೆ ಬಾಲೆ||
ಆರು ನಿನ್ನಯ ಹೃದಾ - ಗಾರದಿ ನರ್ತಿಸಿ|
ಮಾರ ಶೂರತೆಯ ಪ್ರ - ಚಾರಿಸುತಿರ್ಪನ್||
ಸ್ಮೇರವದನ ನಮ್ಮ - ಚೆನ್ನಕೇಶವರಾಯ
ಓರೆಗಣ್ಣಿಂ ಸನ್ನೆ ತೋರುತಲಿಹನೇನೆ ||
ಝಣಜ್ಹಣತ್ಕ ಕಿಂಕಿಣೀ|
ಢಣಡ್ಹಣತ್ಕ ಢಕ್ಕಿಣೀ||
ಸ್ವನೋತ್ತರಂಗಿತಾಂಗಿನೀ
ಮೃಣಾಲ ಲೋಲ ನರ್ತಿನೀ||
ಮುರಜಾಮೋದೆ
(ಅಂತಃಪುರ ಗೀತೆಗಳು)
ರಚನೆ: ಡಿ.ವಿ. ಗುಂಡಪ್ಪ
Photo Courtesy: Rumilus (http://www.flickr.com/photos/rumilus/1069555663/sizes/z/in/photostream/)
Tag: Antahpura Geethegalu, Enee Mahaanandave
Tag: Antahpura Geethegalu, Enee Mahaanandave
ಕಾಮೆಂಟ್‌ಗಳು