ಇಂದು ಶುಕ್ರವಾರ
ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ
ಮುಂಜಾನೆಯ ಮಡಿಉಟ್ಟು ಕುಂಕುಮವ ಹಣೆಗಿಟ್ಟು
ರಂಗೋಲಿಯ ಬಾಗಿಲಿಗಿಟ್ಟು ಹಣ್ಣು ಕಾಯಿ ನೀಡುವ ವಾರ
ಮಲ್ಲಿಗೆ ಜಾಜಿ ಹೂಮಾಲೆ ಹಾಕಿ, ಚಂದನ
ಹಚ್ಚಿ ಸಿಂಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ, ಭಕ್ತಿಯಿ೦ದಲಿ
ಭಜಿಸುವ ವಾರ
ಸುವಾಸಿನಿಯರಿಗೆ ಕುಂಕುಮ ಹಚ್ಚಿ, ಸಂಭ್ರಮದಿ೦ದ
ಬಾಗಿಣ ನೀಡಿ
ಸರ್ವ ಮಂಗಲೆಯ ಕೀರ್ತಿಯ ಹಾಡಿ ಸಕಲ ಭಾಗ್ಯವ ಬೇಡುವ ವಾರ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಾಹಿತ್ಯ: ಆರ್. ಎನ್. ಜಯಗೋಪಾಲ್
Tag: Indu Shukravaara Shubhava taruva vaara
ಕಾಮೆಂಟ್‌ಗಳು