ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀಣಾ ನಿನಗೇಕೋ ಈ ಕಂಪನ




ವೀಣಾ ನಿನಗೇಕೋ ಈ ಕಂಪನ
ಮೃದುವಾಗಿ ಮಿಡಿ, ಮುದವಾಗಿ ನುಡಿ
ರಾಗಸಂಮೋಹನ
ವೀಣಾ ನಿನಗೇಕೋ ಈ ಕಂಪನ
ಮೃದುವಾಗಿ ಮಿಡಿ, ಮುದವಾಗಿ ನುಡಿ
ರಾಗಸಂಮೋಹನ
ವೀಣಾ ನಿನಗೇಕೋ ಈ ಕಂಪನ

ಭಾವನೆ ಬೆರೆತ ಮೋಹಕ ಸೆಳೆತ
ಹಿತವೇ ನಿನಗೇ, ಈ ಪರಿ ಮಿಡಿತ
ಸೂಚನೆಯೇನೋ, ಯೋಚನೆಯೇನೋ
ಅರಿಯೆ ಏಕೋ ಈ ಭಾವನ

ಮಂಗಳವಾದ ಮಂಜುಳಗೀತ
ಅರಿಯುವ ಮನಕೆ ಮೃದು ಸಂಕೇತ
ಸಂಕೋಚ ತೋರಿ ಸಂದೇಶ ಸಾರಿ
ನಲಿವೆ ನೀಡಿ ಸಂವೇದನ

ನಿನ್ನಯ ನಾದಕೆ ಮೈಮನ ಒಲಿಸಿ
ಭಾವತರಂಗದಿ ಲೋಕವ ಮರೆಸಿ
ಸುಪ್ರೇಮರಾಗ   ನೀನುಡಿವಾಗ
ಅದುವೆ ಮನದ ಆರಾಧನ

ಚಿತ್ರ: ಕಲ್ಯಾಣಿ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯನ: ಬಿ ಕೆ ಸುಮಿತ್ರ

Art Credits: Akash Bisikar
Tag: Veena ninageko ee kampana


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ