ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು
ವಿಶ್ವಜೀವನವೊಂದು ಪಾರವಿಲ್ಲದ ಸಿಂಧು
ಮೇಲೆತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿರೆ ಪ್ರೇಮತೀರ್ಥದಿ ಮಿಂದು
ಅದರರ್ಥಗಿರ್ಥಗಳು ಸೃಷ್ಠಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರೆಯುವಾ
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು
ವಿಶ್ವಜೀವನವೊಂದು ಪಾರವಿಲ್ಲದ ಸಿಂಧು
ಮೇಲೆತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿರೆ ಪ್ರೇಮತೀರ್ಥದಿ ಮಿಂದು
ಅದರರ್ಥಗಿರ್ಥಗಳು ಸೃಷ್ಠಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರೆಯುವಾ
ರಚನೆ: ಕುವೆಂಪು.
Tag: Yava janmada maithri, yava janmada mythri
ನಮ್ಮ ಕುವೆಂಪು ಸಾಹಿತ್ಯದಲ್ಲಿ ತುಂಬಾ ಆಳವಾಗಿ ಹುಡುಕಿ ಹೆಕ್ಕಿ ತೆಗೆಯುವ ಮೂಲಕ ಕನ್ನಡ ದಲ್ಲಿಶಾಶ್ವ್ತತವಾಗಿ ಉಳಿದಿದ್ದಾರೆ.
ಪ್ರತ್ಯುತ್ತರಅಳಿಸಿ