ಕಂಡು ಧನ್ಯನಾದೆ
ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನಾ
ಕಣ್ಣಾರೆ ನಾ ಕಂಡು ಧನ್ಯನಾದೆ ನಾ
ಶ್ರೀ ಉಡುಪಿ ಕೃಷ್ಣನಾ
ಕಂಡು ಧನ್ಯನಾದೆನು
ಬ್ರಹ್ಮಾಂಡ ನಖದಿಯೊಡೆದ ಹರಿಯ
ತಂಡ ತಂಡದಿ ಪೂಜೆಗೊಳುತ
ಪಾಂಡವರನು ಸಲಹಿದವನ
ಕಂಡು ಧನ್ಯನಾದೆ ನಾ ಶ್ರೀ
ಉಡುಪಿ ಕೃಷ್ಣನಾ
ಎಂಟು ಮಠದ ಯತಿಗಳು
ತನ್ನ ಬಂಟರೆಂದು ಪೂಜೆಗೊಳುತ
ಕಂಟಕ ಕಂಸಾದಿಗಳನೆ
ದಂಟಿನಂದದಿ ಸೀಳಿದವನ
ಕಂಡು ಧನ್ಯನಾದೆ ನಾ
ಶ್ರೀ ಉಡುಪಿ ಕೃಷ್ಣನಾ
ಏಸು ಜನ್ಮದ ಸುಕೃತವೊ
ಕಮಲೇಶ ವಿಠಲರಾಯ ತನ್ನ
ದಾಸರ ಅಭಿಲಾಷೆಯಿತ್ತು
ಕೂಸಿನಂದದಿ ಪೋಷಿಸುವನ
ಕಂಡು ಧನ್ಯನಾದೆ ನಾ
ಶ್ರೀ ಉಡುಪಿ ಕೃಷ್ಣನಾ
ಕಣ್ಣಾರೆ ನಾ
ಕಂಡು ಧನ್ಯನಾದೆ ನಾ
ಶ್ರೀ ಉಡುಪಿ ಕೃಷ್ಣನಾ
ರಚನೆ: ಕಮಲೇಶ ವಿಠ್ಠಲರು
Tag: Kandu Dhanyanade naa
Tag: Kandu Dhanyanade naa
ಕಾಮೆಂಟ್‌ಗಳು