ಕಾವೇರಿ (ಶ್ರೀರಂಗಪಟ್ಟಣದ ಬಳಿ)
ರಂಗನಾಥನ
ಯೋಗನಿದ್ರೆಗೆ
ಮಂಗಳದ
ದನಿಗೈದಳೆ,
ಎರಡು
ತೋಳನು ಚಾಚಿ ಶ್ರೀರಂಗನನು
ತೆಕ್ಕೆಯಲಿ
ತಬ್ಬಿದವಳೆ
ಒಂದು
ಎರಡಾದರೂ ಕಡೆಗೆ ಒಂದೇ ಎಂಬ
ತತ್ವವನು
ತೋರಿದವಳೆ !
ತೆರೆ
ತೆರೆಯ ನೀರ ವೀಣೆಯಲಿ ವರ
ಸಾಮಗಾನವನು
ಹಾಡುವವಳೆ!
ಎದ್ದು
ಬಿದ್ದಿಹ ರಾಜ್ಯದವಶೇಷವನು ಸುತ್ತಿ
ಸವಿನುಡಿಯ
ಜೋಗುಳದಿ ತೂಗಿದವಳೆ
ನೊಂದ
ಕಂದಗೆ ತಾಯಿ ಆರೈಕೆ ಗೈವಂತೆ
ತೋರುವವಳೆ
ಬ್ರಹ್ಮಗಿರಿಯಿಂದಿಳಿದು
ಬೆಟ್ಟಗಾಡನು ಕಳೆದು
ಬಯಲು
ನಾಡನು ನಗಿಸಿ ನಡೆಯುವವಳೆ
ಗದ್ದೆ
ಬಯಲಿನ ಕೆಸರ ಹಾಳೆ ಹಾಳೆಗಳಲ್ಲಿ
ಹಸಿರ
ಕವನಗಳನ್ನು ಬರೆಯುವವಳೆ
ಕಡಲೆಡೆಗೆ
ಕುದಿಗೊಂಡು ನಡೆಯುವವಳೆ
ನಿತ್ಯರಾಗಿಣಿ
ನೀನು;
ಹಾಡಿಕೊಂಡೇ ಗುರಿಯ
ಮುಟ್ಟಿದವಳೆ
ಶ್ಯಾಮ
ನೀರಧಿಯಲ್ಲಿ ಕರಗಿದವಳೆ!
ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ
Tag: Ranganathana Yoganidrege
ಕಾಮೆಂಟ್‌ಗಳು